ಚಿನ್ನ, ಬೆಳ್ಳಿ ಬೆಲೆ ಏರಿಕೆ: ಮತ್ತಷ್ಟು ದುಬಾರಿಯಾಗಲಿದೆ ಚಿನ್ನಾಭರಣ

gold
Published on

ಬೆಂಗಳೂರು: ಬಂಗಾರ, ಬೆಳ್ಳಿ ದರ ಯಾವ್ಯಾವ ನಗರಗಳಲ್ಲಿ ಎಷ್ಟಿದೆ.. ಎಲ್ಲಿ ಹೆಚ್ಚಾಗಿದೆ, ಎಲ್ಲಿ ಕಡಿಮೆಯಾಗಿದೆ ಅನ್ನೋ ಗೊಂದಲವೇ..? ಹಾಗಾದ್ರೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ..

ಚಿನ್ನದ ಮೇಲೆ ಭಾರತೀಯರಿಗೆ ಕೊಂಚ ಜಾಸ್ತಿಯೇ ಪ್ರೀತಿ. ಹಬ್ಬ-ಹರಿದಿನಗಳ ಸಾಲು ಬಂದರೆ ಚಿನ್ನಾಭರಣಗಳನ್ನು ಖರೀದಿ ಹೆಚ್ಚುತ್ತದೆ. ಆದರೆ ಚಿನ್ನದ ಬೆಲೆ ಒಂದು ದಿನವಿದ್ದಂತೆ ಮತ್ತೊಂದು ದಿನ ಇರುವುದಿಲ್ಲ. ದೇಶಾದ್ಯಂತ ಬೆಲೆ ವ್ಯತ್ಯಾಸವಾಗುತ್ತಿರುತ್ತದೆ. ದೈನಂದಿನ ದರದಲ್ಲಿ ಚಿನ್ನಾಭರಣ ಬೆಲೆ ಏರಿಳಿತ ಸಹಜ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 53,350 ರೂ.

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 58.200 ರೂ.

ಬೆಳ್ಳಿ ಬೆಲೆ 1 ಕೆಜಿ: 69,000 ರೂ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ​ ಚಿನ್ನದ ಬೆಲೆ 53,150 ರೂಪಾಯಿ ಇತ್ತು. ಆದರೆ ಇಂದು 53,350 ರೂಪಾಯಿ ಆಗಿದೆ.

ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 57.980 ರೂಪಾಯಿ ಇತ್ತು. ಆದರೆ ಇಂದು 58.200 ರೂಪಾಯಿ ಆಗಿದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

ಬೆಂಗಳೂರು: 53,350 ರೂ.

ಮುಂಬೈ: 53,350 ರೂ.

ದೆಹಲಿ: 53,500 ರೂ.

ಕೇರಳ: 53,350 ರೂ.

ಜಾಗತಿಕ ಮಟ್ಟದ ಆರ್ಥಿಕತೆ, ಹಣದುಬ್ಬರದ ಅನಿಶ್ಚಿತತೆ, ನಿರುದ್ಯೋಗ, ಬಡ್ಡಿ ದರ ಏರಿಕೆ, ಡಾಲರ್ ಎದುರು ರುಪಾಯಿ ಕುಸಿತ ಮತ್ತು ಬ್ಯಾಂಕಿಂಗ್ ಬಿಕ್ಕಟ್ಟು ಎಲ್ಲವೂ ಪ್ರಭಾವ ಬೀರುತ್ತಿದೆ. ಗಣೇಶ ಹಬ್ಬದ ಬಳಿಕ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಈ ವಾರ ಚಿನ್ನ ದಿನೇ ದಿನೇ ದುಬಾರಿಯಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net