

ನವದೆಹಲಿ: ಅಮೆರಿಕ ಮತ್ತು ಚೀನಾ ಮಧ್ಯೆ ತೆರಿಗೆ ಇಳಿಕೆಗೆ ಸಂಬಂಧಿಸಿದಂತೆ ನಡೆದ ಒಪ್ಪಂದದ ಪರಿಣಾಮವಾಗಿ ಹೂಡಿಕೆದಾರರು ಷೇರು ಪೇಟೆಯತ್ತ ಮುಖ ಮಾಡಿದ್ದರಿಂದ ಚಿನ್ನದ ಬೆಲೆ ಸೋಮವಾರ ಒಂದೇ ದಿನ ರಾಷ್ಟ್ರ ರಾಜಧಾನಿಯಲ್ಲಿ 3,400 ರೂ.ಗಳಷ್ಟು ಇಳಿಕೆಯಾಗಿದೆ.
ಶನಿವಾರ 10 ಗ್ರಾಂಗೆ 99,950 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಸೋಮವಾರ 96,550ಕ್ಕೆ ಇಳಿಯಿತು. 99,500 ರೂ. ಇದ್ದ ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ ಸೋಮವಾರ 96,100 ರೂ. ಆಯಿತು.
ಶನಿವಾರ ಕೆಜಿಗೆ 99,900 ರೂ. ಇದ್ದ ಬೆಳ್ಳಿಯ ದರ ಕೂಡ ಸೋಮವಾರ 200 ರೂ.ನಷ್ಟು ಕಡಿಮೆಯಾಗಿ 99,700 ರೂ. ಆಯಿತು ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.