

ನವದೆಹಲಿ: ದುರ್ಬಲ ಜಾಗತಿಕ ಪ್ರವೃತ್ತಿಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಸೋಮವಾರ 1 ಸಾವಿರ ರೂ.ನಷ್ಟು ಕಡಿಮೆಯಾಗಿದೆ. ಗುರುವಾರ 10 ಗ್ರಾಂಗೆ 99,400 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಸೋಮವಾರ 98,400 ರೂ.ಗೆ ಇಳಿದಿದೆ.
ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ ಗುರುವಾರ 98,900 ರೂ. ಇದ್ದದ್ದು ಸೋಮವಾರ 97,900ಕ್ಕೆ ಇಳಿದಿದೆ. ಬೆಳ್ಳಿ ಬೆಲೆಯೂ ಸೋಮವಾರ 1,400 ರೂ.ನಷ್ಟು ಕುಸಿದಿದೆ. ಕೆಜಿಗೆ 99,900 ರೂ. ಇದ್ದ ಬೆಳ್ಳಿ ದರ 98,500ಕ್ಕೆ ಇಳಿದಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.
ಕಾರಣವೇನು?: ಅಮೆರಿಕ-ಚೀನಾ ವ್ಯಾಪಾರ ಉದ್ವಿಗ್ನತೆ ಸ್ವಲ್ಪಮಟ್ಟಿಗೆ ಕಡಿಮೆಯಾದ ಹಿನ್ನೆಲೆಯಲ್ಲಿ ಹೂಡಿಕೆದಾರರ ಚಿತ್ತ ಷೇರುಪೇಟೆಯತ್ತ ಸಾಗಿದ್ದು, ಸುರಕ್ಷಿತ ಹೂಡಿಕೆಯಾದ ಚಿನ್ನ ಅಷ್ಟರಮಟ್ಟಿಗೆ ತನ್ನ ಹೊಳಪು ಕಳೆದುಕೊಂಡಿದೆ. ಡಾಲರ್ ಮೌಲ್ಯ ಹೆಚ್ಚಾಗಿದ್ದು ಕೂಡ ಚಿನ್ನದ ಬೆಲೆ ಇಳಿಕೆಗೆ ತನ್ನ ಕೊಡುಗೆ ನೀಡಿದೆ ಎಂದು ಅಬನ್ಸ್ ಫೈನಾನ್ಷಿಯಲ್ ಸರ್ವಿಸಸ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಚಿಂತನ್ ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕದ ವಸ್ತುಗಳ ಆಮದಿನ ಮೇಲೆ ತಾನು ಹೇರಿರುವ ಶೇ. 125ರಷ್ಟು ತೆರಿಗೆಯ ವ್ಯಾಪ್ತಿಯಿಂದ ಕೆಲವು ವಸ್ತುಗಳಿಗೆ ವಿನಾಯ್ತಿ.