

Gold Rates: ಚಿನ್ನದ ಗ್ರಾಹಕರಿಗೆ ಇದೀಗ ಕೊಂಚ ರಿಲೀಫ್ ಸಿಕ್ಕಂತಾಗಿದೆ. ಅದಕ್ಕೆ ಕಾರಣ, ಗೋಲ್ಡ್ ಬೆಲೆಯಲ್ಲಿನ ಇಳಿಕೆ. ಒಂದೆಡೆ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಉದ್ವಿಗ್ನತೆ ಕುಸಿಯುತ್ತಿದ್ದರೆ, ಮತ್ತೊಂದೆಡೆ, ಪಾಕ್ ಮತ್ತು ಭಾರತ ನಡುವಿನ ಉದ್ವಿಗ್ನತೆ ಕೂಡ ಕಡಿಮೆಯಾಗಿದೆ. ಇದರಿಂದ ಹೂಡಿಕೆದಾರರು ನಿರಾಳರಾಗಿ ಷೇರುಗಳಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಇದರಿಂದಾಗಿ, ಚಿನ್ನ-ಬೆಳ್ಳಿ ಬೆಲೆಗಳು ಸಹ ಕ್ರಮೇಣವಾಗಿ ಕುಸಿತ ಕಾಣುತ್ತಿವೆ.
ಮದುವೆ ಸೀಸನ್ ಶುರುವಿನ ಬೆನ್ನಲ್ಲೇ ಚಿನ್ನದ ಬೆಲೆ ಕೂಡ ದಿನ ಕಳೆದಂತೆ ಇಳಿಕೆ ಕಾಣುತ್ತಿದೆ. ಇಂದು (ಮೇ.15) ಚಿನ್ನದ ಬೆಲೆ ತೀವ್ರವಾಗಿ ಕುಸಿದಿದೆ. ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂ 2,130 ರೂ.ನಷ್ಟು ಕುಸಿದರೆ, 22 ಕ್ಯಾರೆಟ್ ಚಿನ್ನದ 1,950 ರೂ.ನಷ್ಟು ಕುಸಿದಿದೆ. ಮತ್ತೊಂದೆಡೆ, ಬೆಳ್ಳಿಯ ಬೆಲೆಯೂ ಕುಸಿದಿದೆ. ಒಂದು ಕೆಜಿ ಬೆಳ್ಳಿ 1,000 ರೂ. ಕುಸಿತ ಕಂಡಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಹ ಕುಸಿದಿವೆ. ಚಿನ್ನವು ಪ್ರತಿ ಔನ್ಸ್ಗೆ 40 ಡಾಲರ್ನಷ್ಟು ಕುಸಿದು 3,147ಕ್ಕೆ (31.10 ಗ್ರಾಂ) ತಲುಪಿದೆ. ಬೆಳ್ಳಿ ಕೂಡ 31.91 ಡಾಲರ್ ವಹಿವಾಟು ನಡೆಸುತ್ತಿದೆ. ಹಾಗಿದ್ದರೆ, ಇಂದಿನ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ? ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.
ನಿಮ್ಮ ಗಮನಕ್ಕೆ: ಮೇಲೆ ತಿಳಿಸಲಾದ ದರ ಇಂದು ಬೆಳಗ್ಗೆ 10 ಗಂಟೆಯವರೆಗೆ ದಾಖಲಾದ ಮಾಹಿತಿ. ಚಿನ್ನ-ಬೆಳ್ಳಿ ಬೆಲೆಗಳು ದಿನಕ್ಕೆ ಹಲವು ಬಾರಿ ಏರುಪೇರು ಆಗುತ್ತಿರುತ್ತವೆ. ನಿಖರವಾದ ಬೆಲೆಗಳಿಗಾಗಿ, ನಿಮ್ಮ ಹತ್ತಿರದ ಆಭರಣ ಮಳಿಗೆ ಅಥವಾ ಅಧಿಕೃತ ವೆಬ್ಸೈಟ್ ದರ ಪರಿಶೀಲಿಸಿ,(ಏಜೆನ್ಸೀಸ್).