ಸತತ 5ನೇ ದಿನವೂ ಚಿನ್ನದ ಬೆಲೆ ಏರಿಕೆ! ಎಷ್ಟಿದೆ ಗೊತ್ತೇ?

gold
Published on

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಸೋಮವಾರ 110 ರೂ. ಏರಿಕೆಯಾಗಿದೆ. ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಶುಕ್ರವಾರ 10 ಗ್ರಾಂಗೆ 80,550 ರೂ. ಇದ್ದದ್ದು ಸೋಮವಾರ 80,660 ರೂ. ಆಗಿದೆ.

ಕಳೆದ ಐದು ವಹಿವಾಟಿನ ದಿನಗಳಲ್ಲಿ ಚಿನ್ನದ ಬೆಲೆ ಶೇ. 2.1ರಷ್ಟು ಅಂದರೆ 1,660 ರೂ. ಏರಿದಂತಾಗಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆಯು ಶುಕ್ರವಾರ 10 ಗ್ರಾಂಗೆ 80,150 ರೂ. ಇದ್ದದ್ದು ಸೋಮವಾರ 80,260 ರೂ.ಗೆ ಏರಿದೆ. ಬೆಳ್ಳಿಯ ದರವು ಸೋಮವಾರ ಕೆಜಿಗೆ 93 ಸಾವಿರ ರೂ. ಇತ್ತು ಎಂದು ಅಖಿಲ ಭಾರತ ಸರಾಫರ ಸಂಘ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net