ಆಗಸ್ಟ್​ ಬೆನ್ನಲ್ಲೇ ದುಬಾರಿಯಾಯ್ತು ಚಿನ್ನದ ಬೆಲೆ! ಒಂದೇ ದಿನ ಭಾರೀ ಹೆಚ್ಚಳ, ಹೀಗಿದೆ ತಜ್ಞರ ಭವಿಷ್ಯ | Gold

gold
Published on

Gold Price: ಚಿನ್ನದ ಬೆಲೆ 1 ಲಕ್ಷ ರೂ. ಗಡಿದಾಟಿದ್ದೇ ತಡ ಗ್ರಾಹಕರ ಬೇಸರ, ಆತಂಕ ಕೂಡ ಹೆಚ್ಚಾಗಿದೆ. ದಿನ ಕಳೆದಂತೆ ದರ ಆಕಾಶದತ್ತ ಮುಖಮಾಡಿದ್ದು, ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರು ಚಿನ್ನ ಕೊಳ್ಳುವಿಕೆಯ ನಿರ್ಧಾರವನ್ನು ಇಲ್ಲಿಗೆ ಕೈಬಿಡಬೇಕು ಎನ್ನುವಂತಾಗಿದೆ. 10 ಗ್ರಾಂ 24 ಕ್ಯಾರೆಟ್​ ಚಿನ್ನದ ದರ ಈಗಾಗಲೇ 1 ಲಕ್ಷ ದಾಟಿ ಮುನ್ನುಗ್ಗುತ್ತಿದ್ದು, ಮುಂದಿನ ಕೆಲವು ದಿನಗಳಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸುವತ್ತ ಸಾಗುತ್ತಿವೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ಚಿನ್ನ-ಬೆಳ್ಳಿ ತೀವ್ರ ಏರಿಕೆ!

ಮಂಗಳವಾರ (ಜು.22) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂ 1,140 ರೂ. ಏರಿಕೆಯಾಗಿದೆ. ಇನ್ನು 22 ಕ್ಯಾರೆಟ್ ಚಿನ್ನದ ಬೆಲೆ 1,050 ರೂ. ಹೆಚ್ಚಾಗಿದೆ. ಕಳೆದ ಕೆಲವು ದಿನಗಳ ಏರಿಕೆಗಳನ್ನು ಗಮನಿಸಿ ನೋಡುವುದಾದರೆ, ಒಂದೇ ದಿನದಲ್ಲಿ ಚಿನ್ನದ ದರ ಈ ಮಟ್ಟಿಗಿನ ಏರಿಕೆಯನ್ನು ಕಂಡಿರಲಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕೊಂಚ ಹೆಚ್ಚಿದೆ. ಒಂದು ಔನ್ಸ್ ಚಿನ್ನದ ಬೆಲೆ ಎರಡು ಡಾಲರ್ ಏರಿದೆ. ಒಂದು ಔನ್ಸ್ ಚಿನ್ನದ ಬೆಲೆ ಪ್ರಸ್ತುತ 3,390 ಡಾಲರ್‌ನಲ್ಲಿ ವಹಿವಾಟು ನಡೆಸುತ್ತಿದೆ.

ಆಗಸ್ಟ್ ತಿಂಗಳಲ್ಲಿ ಹಬ್ಬ ಮತ್ತು ಟ್ರಂಪ್​ ಸುಂಕ

ಆಗಸ್ಟ್ 1ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿಧಿಸಿರುವ ಪ್ರತೀಕಾರದ ಸುಂಕಗಳನ್ನು ಜಾರಿಗೆ ತರುವ ಗಡುವು ಸಮೀಪಿಸುತ್ತಿದ್ದಂತೆ, ವ್ಯಾಪಾರ ಮಾತುಕತೆಗಳ ಮೇಲಿನ ಅನಿಶ್ಚಿತತೆಯು ಚಿನ್ನದ ಸುರಕ್ಷಿತ ತಾಣದ ಬೇಡಿಕೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಮತ್ತೊಂದೆಡೆ, ಆಗಸ್ಟ್​ನಿಂದ ಅಕ್ಟೋಬರ್​ವರೆಗೆ ದೇಶದಲ್ಲಿ ಹಲವು ಹಬ್ಬಗಳು ಜರುಗಲಿದ್ದು, ಇದರಿಂದ ಚಿನ್ನದ ಬೇಡಿಕೆಯು ಮತ್ತಷ್ಟ ಹೆಚ್ಚಲಿದೆ ಎಂದು ಜೆಎಂ ಫೈನಾನ್ಶಿಯಲ್ ಸರ್ವೀಸಸ್‌ನ ಇಬಿಜಿ-ಕಮಾಡಿಟಿ ಮತ್ತು ಕರೆನ್ಸಿ ರಿಸರ್ಚ್‌ನ ಉಪಾಧ್ಯಕ್ಷ ಪ್ರಣವ್ ಮೋರ್ ಹೇಳಿದ್ದಾರೆ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ದರ

  • ನವದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 93,000ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 1,01,440. ರೂ. ಆಗಿದೆ.
  • ಮುಂಬೈ, ಬೆಂಗಳೂರು, ಚೆನ್ನೈ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 92,850 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 1,01,440 ರೂ. ಆಗಿದೆ.
  • ಇನ್ನು ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣದಲ್ಲಿ, 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 92,850 ರೂ. ಇದ್ದರೆ, 24 ಕ್ಯಾರೆಟ್ ಬೆಲೆ 1,01,290 ರೂ. ಆಗಿದೆ.

ಬೆಳ್ಳಿ ಕೂಡ ದುಬಾರಿ

  • ದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,18,000 ರೂ. ಆಗಿದೆ.
  • ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,28,000 ರೂ. ಆಗಿದೆ.
  • ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,28,000 ರೂ. ಇದೆ,(ಏಜೆನ್ಸೀಸ್).

ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ದಯವಿಟ್ಟು ಗಮನಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net