2024ರಲ್ಲಿ 72 ಸಾವಿರ ರೂಪಾಯಿಗೆ ಏರಲಿದೆ ಚಿನ್ನದ ಬೆಲೆ?

Gold Rate
Published on

ನವದೆಹಲಿ: ಹೊಸ ವರ್ಷದಲ್ಲಿ ಚಿನ್ನದ ಮೆರುಗು ಇನ್ನಷ್ಟು ಹೆಚ್ಚಲಿದೆ. 2024ರಲ್ಲಿ ಬಂಗಾರದ ಬೆಲೆ 10 ಗ್ರಾಂಗೆ 72 ಸಾವಿರ ರೂ.ವರೆಗೆ ತಲುಪಬಹುದು ಎಂದು ಅಂದಾಜು ಮಾಡಲಾಗಿದೆ.

ಹಲವು ದೇಶಗಳ ಕೇಂದ್ರೀಯ ಬ್ಯಾಂಕ್​ಗಳು, ಅದರಲ್ಲೂ ಪ್ರಮುಖವಾಗಿ ಅಮೆರಿಕದ ಫೆಡರಲ್ ರಿಸರ್ವ್ ರೂಪಿಸುವ ಹಣಕಾಸು ನೀತಿಗಳು ಬೆಲೆ ಏರಿಕೆಗೆ ಮುಖ್ಯ ಅಂಶವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ರಾಜಕೀಯ ಸನ್ನಿವೇಶ, ಡಾಲರ್ ಸೂಚ್ಯಂಕದಲ್ಲಿನ ಪ್ರವೃತ್ತಿ, ಜಾಗತಿಕ ಬೆಳವಣಿಗೆಯ ಬಿರುಸು, ಪ್ರಮುಖ ದೇಶಗಳಲ್ಲಿ ಚುನಾವಣೆಗಳಿಂದ ಉಂಟಾದ ಅನಿಶ್ಚಿತ ಪರಿಸ್ಥಿತಿ ಮತ್ತು ಕೇಂದ್ರೀಯ ಬ್ಯಾಂಕ್​ಗಳು ಚಿನ್ನವನ್ನು ಖರೀದಿಸುವ ಈಗಿನ ಪ್ರವೃತ್ತಿ ಮೊದಲಾದವುಗಳು ಬಂಗಾರದ ಭವಿಷ್ಯದ ಹಾದಿಯನ್ನು ನಿರ್ಧರಿಸಲಿವೆ. 2023ರಲ್ಲಿ ಸದೃಢವಾದ ಶೇ.15ರಷ್ಟು ಗಳಿಕೆಯ ಕಾರ್ಯಕ್ಷಮತೆಯನ್ನು ಆಧರಿಸಿ ಸಂಕೀರ್ಣವಾದ ಬೃಹತ್ ಆರ್ಥಿಕ ಪರಿಸರದೊಳಗೆ ಚಿನ್ನ 2024ರಲ್ಲಿಯೂ ತನ್ನ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಲಿದೆ.

ಬಡ್ಡಿ ದರವನ್ನು ಏರಿಸುವ ಆಕ್ರಮಣಕಾರಿ ನೀತಿಯ ಸುಳಿವು ಕೊಟ್ಟಿರುವ ಅಮೆರಿಕ ಫೆಡರಲ್ ರಿಸರ್ವ್, ತನ್ನ ನೀತಿಯ ನಿಲುವನ್ನು ಸ್ಪಷ್ಟಪಡಿಸಿದೆ. 2022ರಿಂದೀಚೆಗೆ ಪ್ರಮುಖ ಕೇಂದ್ರೀಯ ಬ್ಯಾಂಕ್​ಗಳು ಬಡ್ಡಿ ದರ ಹೆಚ್ಚಳ ನೀತಿಯನ್ನು ಅನುಸರಿಸಿರುವುದರಿಂದ ಜಾಗತಿಕ ಆರ್ಥಿಕ ಬೆಳವಣಿಗೆ ಇಳಿಮುಖವಾಗುವ ಸಂಭವವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net