ಷೇರುಪೇಟೆ, ಚಿನ್ನದ ದರ ಏರಿಕೆ

Gold
Published on

ನವದೆಹಲಿ: ಷೇರುಪೇಟೆ ಮತ್ತು ಚಿನಿವಾರಪೇಟೆಯಲ್ಲಿ ಮಂಗಳವಾರ ಏರಿಕೆ ಕಂಡುಬಂದಿದೆ. ದೆಹಲಿಯಲ್ಲಿ 1,182 ರೂ. ಹೆಚ್ಚಳವಾಗುವ ಮೂಲಕ 10 ಗ್ರಾಂ ಚಿನ್ನದ ದರ 54,856 ರೂ.ಗೆ ತಲುಪಿದೆ.

ಬೆಳ್ಳಿ ಬೆಲೆ 1,587 ರೂ. ಏರಿಕೆ ದಾಖಲಿಸಿದ್ದು, ಪ್ರತಿ ಕೆ.ಜಿ.ಗೆ 72,547 ರೂ. ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬಂಗಾರದ ದರ ಏರುಗತಿಯಲ್ಲಿದ್ದು, ಪ್ರತಿ ಔನ್ಸ್​ಗೆ 2,005 ಡಾಲರ್ ಮತ್ತು ಔನ್ಸ್ ಬೆಳ್ಳಿಗೆ 28.15 ಡಾಲರ್ ಇದೆ. ಮತ್ತೊಂದೆಡೆ ಸೆನ್ಸೆಕ್ಸ್ 478 ಪಾಯಿಂಟ್ (ಶೇ.1.26) ವೃದ್ಧಿ ಕಾಣುವ ಮೂಲಕ 38,528.32ಕ್ಕೆ ವಹಿವಾಟು ಮುಕ್ತಾಯವಾಗಿದೆ.

ನಿಫ್ಟಿ 138.25 (ಶೇ.1.23) ಅಂಶ ಏರಿಕೆಯಾಗಿದ್ದು, 11,385.35ಕ್ಕೆ ವಹಿವಾಟು ಅಂತ್ಯಗೊಂಡಿದೆ. ಅಲ್ಟ್ರಾ ಟೆಕ್ ಸಿಮೆಂಟ್ ಷೇರು ಮೌಲ್ಯ ಶೇ. 3 ಹೆಚ್ಚಳವಾಗಿದ್ದು, ರಿಲಯನ್ಸ್ ಇಂಡಸ್ಟ್ರೀಸ್, ಎಚ್​ಡಿಎಫ್​ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಲಾಭ ದಾಖಲಿಸಿವೆ. ಟೆಕ್ ಮಹಿಂದ್ರಾ, ಎಚ್​ಸಿಎಲ್ ಟೆಕ್, ಬಜಾಜ್ ಆಟೋ, ಪವರ್ ಗ್ರಿಡ್ ಷೇರು ಇಳಿಮುಖವಾಗಿವೆ. ರೂಪಾಯಿ ಮೌಲ್ಯ 12 ಪೈಸೆ ವೃದ್ಧಿಸಿದ್ದು, ಪ್ರತಿ ಡಾಲರ್​ಗೆ 74.76 ರೂ.ಗೆ ಸ್ಥಿರವಾಗಿದೆ.

ಪೆಟ್ರೋಲ್ 17 ಪೈಸೆ ತುಟ್ಟಿ: ಪೆಟ್ರೋಲ್ ದರ ಲೀಟರ್​ಗೆ 17 ಪೈಸೆ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಲೀಟರ್​ಗೆ 80.90 ರೂಪಾಯಿ ತಲುಪಿದೆ. ಡೀಸೆಲ್ ಬೆಲೆ ಯಥಾಸ್ಥಿತಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net