ಯೂ-ಟರ್ನ್ ತೆಗೆದುಕೊಂಡ ಚಿನ್ನದ ಬೆಲೆ

Gold Rate
Published on

ನವದೆಹಲಿ: ದುರ್ಬಲ ಜಾಗತಿಕ ಪ್ರವೃತ್ತಿಯ ಹಿನ್ನೆಲೆಯಲ್ಲಿ ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ ಒಮ್ಮೆಲೇ 2,400 ರೂ. ಇಳಿಕೆಯಾಗಿ 1 ಲಕ್ಷ ರೂ.ಗಳ ಮಟ್ಟದಿಂದ ಕೆಳಗಿಳಿದಿದ್ದು, 10 ಗ್ರಾಂಗೆ 99,200 ರೂ. ಆಗಿದೆ.

ಅಖಿಲ ಭಾರತ ಸರಾಫ ಸಂಘ ನೀಡಿರುವ ಮಾಹಿತಿಯ ಪ್ರಕಾರ, ಮಂಗಳವಾರ 1,800 ರೂ. ಏರಿಕೆಯಾಗಿ 10 ಗ್ರಾಂಗೆ 1,01,600 ರೂ.ಗೆ ತಲುಪಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನ ಬುಧವಾರ ದಿಢೀರನೆ ಇಳಿಕೆಯಾಗಿ 99,200 ರೂ.ಗೆ ತಲುಪಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ ಬುಧವಾರ 3,400 ರೂ.ನಷ್ಟು ಕೆಳಗಿಳಿದಿದ್ದು, 10 ಗ್ರಾಂಗೆ 98,700 ರೂ. ಆಗಿದೆ. ಇದು ಮಂಗಳವಾರ 2,800 ರೂ. ಏರಿಕೆಯಾಗಿ 1,02,100 ರೂ.ಗೆ ಮುಟ್ಟಿತ್ತು. ಈ ಮಧ್ಯೆ, ಬೆಳ್ಳಿಯ ದರ 700 ರೂ. ಹೆಚ್ಚಳವಾಗಿ ಕೆಜಿಗೆ 99,200 ರೂ. ಆಗಿದೆ. ಇದು ಮಂಗಳವಾರ 98,500 ರೂ. ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net