ದಾಖಲೆಯಲ್ಲೇ ಸ್ಥಿರಗೊಂಡ ಚಿನ್ನದ ಬೆಲೆ

gold
Published on
  • 10 ಗ್ರಾಂಗೆ 94,150 ರೂ.
  • ಸಾವಿರ ರೂ. ಕುಸಿದ ಬೆಳ್ಳಿ ದರ

ನವದೆಹಲಿ: ಮಂಗಳವಾರ 10 ಗ್ರಾಂಗೆ 94,150 ರೂ.ಗೆ ಏರಿಕೆಯಾಗಿ ದಾಖಲೆ ಸೃಷ್ಟಿಸಿದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಬುಧವಾರವೂ ಅದೇ ಮಟ್ಟದಲ್ಲಿ ಮುಂದುವರಿದಿದೆ.

ಶೇ. 99.5ರಷ್ಟು ಶುದ್ಧತೆಯ ಚಿನ್ನದ ದರ ಕೂಡ ಮಂಗಳವಾರ 10 ಗ್ರಾಂಗೆ 93,700 ರೂ. ಇದ್ದದ್ದು ಬುಧವಾರವೂ ಅದೇ ದರ ಸ್ಥಿರವಾಗಿತ್ತು. ಬೆಳ್ಳಿಯ ದರ ಮಾತ್ರ 1000 ರೂ. ಕಡಿಮೆಯಾಗಿ 1,01,500 ರೂ.ಗೆ ತಲುಪಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net