ಚಿನ್ನದ ಬೆಲೆ 550 ರೂ. ಏರಿಕೆ

golds
Published on

ನವದೆಹಲಿ: ಆಭರಣ ತಯಾರಕರು ಮತ್ತು ಚಿಲ್ಲರೆ ಮಾರಾಟಗಾರರಿಂದ ಖರೀದಿ ಹೆಚ್ಚಿದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ಚಿನ್ನದ ಬೆಲೆ 550 ರೂ. ಏರಿಕೆಯಾಗಿದೆ.

ಶುಕ್ರವಾರ 10 ಗ್ರಾಂಗೆ 98,750 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಸೋಮವಾರ 99,300 ರೂ.ಗೆ ಏರಿಕೆಯಾಗಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನದ ದರ 500 ರೂ.ನಷ್ಟು ಹೆಚ್ಚಾಗಿ, 98,800 ರೂ.ಗೆ ತಲುಪಿದೆ.

ಬೆಳ್ಳಿಯ ದರ ಶುಕ್ರವಾರ ಕೆಜಿಗೆ 99,200 ರೂ. ಇದ್ದದ್ದು ಸೋಮವಾರ 1,170 ರೂ. ಏರಿಕೆಯಾಗಿ 1,00,370 ರೂ.ಗೆ ತಲುಪಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net