

ನವದೆಹಲಿ: ಹೂಡಿಕೆದಾರರು ಮತ್ತು ದಾಸ್ತಾನುದಾರರ ಆಸಕ್ತಿಯ ಹೆಚ್ಚಳದಿಂದಾಗಿ ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 250 ರೂ. ಏರಿಕೆಯಾಗಿದೆ.
ಶೇ. 99.9ರಷ್ಟು ಶುದ್ಧತೆಯ ಚಿನ್ನ ಬುಧವಾರ 10 ಗ್ರಾಂಗೆ 98,420 ರೂ. ಇದ್ದದ್ದು ಗುರುವಾರ 98,670 ರೂ.ಗೆ ತಲುಪಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನ 200 ರೂ. ಏರಿಕೆಯಾಗಿದ್ದು, 98,000 ರೂ.ನಿಂದ 98,200 ರೂ.ಗೆ ತಲುಪಿದೆ. ಬೆಳ್ಳಿ ಬೆಲೆ ಗುರುವಾರ ಕೆಜಿಗೆ 1,04,000 ಆಗಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.