

ನವದೆಹಲಿ: ಆಭರಣ ತಯಾರಕರು ಮತ್ತು ಚಿಲ್ಲರೆ ಮಾರಾಟಗಾರರಿಂದ ಬೇಡಿಕೆ ಹೆಚ್ಚಿದ ಪರಿಣಾಮವಾಗಿ ಮತ್ತು ಡಾಲರ್ ಎದುರು ರೂಪಾಯಿ ದುರ್ಬಲವಾದ ಹಿನ್ನೆಲೆಯಲ್ಲಿ ಚಿನ್ನದ ಬೆಲೆಯು ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ 200 ರೂ.ನಷ್ಟು ಹೆಚ್ಚಳವಾಗಿದೆ.ಶುಕ್ರವಾರ 10 ಗ್ರಾಂಗೆ 87,700 ರೂ. ಇದ್ದ ಶೇ. 99.9 ಶುದ್ಧತೆಯ ಚಿನ್ನದ ಬೆಲೆ ಸೋಮವಾರ 87,900 ರೂ.ಗೆ ಏರಿತು. ಶೇ. 99.5ರಷ್ಟು ಶುದ್ಧತೆಯ ಚಿನ್ನ 87,300 ರೂ. ಇದ್ದದ್ದು 87,500 ರೂ. ಆಗಿದೆ. ಬೆಳ್ಳಿಯ ದರ 100 ರೂ. ಏರಿಕೆಯಾಗಿ, ಕೆಜಿಗೆ 96,500 ರೂ.ಗೆ ತಲುಪಿದೆ.