ಚಿನ್ನದ ಬೆಲೆಯಲ್ಲಿ ದಿಢೀರ್ ಭಾರೀ ಇಳಿಕೆ! ಎಷ್ಟಾಗಿದೆ? ಇಲ್ಲಿ ತಿಳಿಯಿರಿ

gold
Published on

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿನ ದುರ್ಬಲ ಪ್ರವೃತ್ತಿಯ ಹಿನ್ನೆಲೆಯಲ್ಲಿ ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 1,150 ರೂ.ನಷ್ಟು ಕುಸಿತ ಕಂಡಿದೆ.

ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಮಂಗಳವಾರ 10 ಗ್ರಾಂಗೆ 89,350 ರೂ. ಇದ್ದದ್ದು ಗುರುವಾರ 88,200ಕ್ಕೆ ಇಳಿಯಿತು. ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ ಮಂಗಳವಾರ 10 ಗ್ರಾಂಗೆ 88,950 ರೂ. ಇದ್ದದ್ದು ಗುರುವಾರ 87,800 ರೂ.ಗೆ ಇಳಿಯಿತು.

ಬೆಳ್ಳಿಯ ದರವೂ 1 ಸಾವಿರ ರೂ.ನಷ್ಟು ಕುಸಿದು, ಕೆಜಿಗೆ 98,500 ರೂ.ಗೆ ತಲುಪಿತು. ಮಂಗಳವಾರ ಇದು 99,500 ರೂ. ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net