ಮತ್ತೆ ಹೊಸ ದಾಖಲೆ ಬರೆದ ಚಿನ್ನ; ಹೀಗಿದೆ ಇಂದಿನ ದರ

golds
Published on

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಹೆಚ್ಚಳವಾದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿಯೂ ಶುಕ್ರವಾರ ಚಿನ್ನದ ದರ 1,100 ರೂ.ನಷ್ಟು ಹೆಚ್ಚಳವಾಗಿದೆ.

ಗುರುವಾರ 10 ಗ್ರಾಂಗೆ 91,050 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಶುಕ್ರವಾರ 92,150 ರೂ. ಆಗಿದ್ದು, ಇದು ಹೊಸ ದಾಖಲೆಯಾಗಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ. 2024-25ನೇ ಆರ್ಥಿಕ ವರ್ಷದಲ್ಲಿ ಚಿನ್ನದ ಬೆಲೆ 23,730 ರೂ.ನಷ್ಟು (ಶೇ. 35) ಹೆಚ್ಚಳವಾಗಿದೆ. ಕಳೆದ ವರ್ಷದ ಏಪ್ರಿಲ್ 1ರಂದು 10 ಗ್ರಾಂಗೆ 68,420 ರೂ. ಇತ್ತು.

ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ ಶುಕ್ರವಾರ 91,700 ರೂ.ಗೆ ತಲುಪಿ ದಾಖಲೆ ಸೃಷ್ಟಿಸಿದೆ. ಗುರುವಾರ ಇದು 90,600 ರೂ. ಇತ್ತು. ಬೆಳ್ಳಿಯ ದರ 1,300 ರೂ. ಏರಿಕೆಯಾಗಿ ಪ್ರತಿ ಕೆಜಿಗೆ 1,03,000 ರೂ.ಗೆ ತಲುಪಿದೆ. ಗುರುವಾರ ಇದು 1,01,700 ರೂ. ಇತ್ತು. ಮಾ. 19ರಂದು ಬೆಳ್ಳಿ ಕೆಜಿಗೆ 1,03,500 ರೂ.ಗೆ ಹೋಗಿ ದಾಖಲೆ ಸೃಷ್ಟಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net