ಮತ್ತೇ ಚಿನ್ನದ ದರ ಇಳಿಕೆ! ಹೀಗಿದೆ ವಿವರ

golds
Published on

ನವದೆಹಲಿ: ಆಭರಣ ವ್ಯಾಪಾರಿಗಳು ಖರೀದಿ ಕಡಿಮೆ ಮಾಡಿದ್ದರಿಂದ ಮತ್ತು ಹೂಡಿಕೆದಾರರು ಮಾರಾಟಕ್ಕೆ ಇಳಿದಿದ್ದರ ಪರಿಣಾಮವಾಗಿ ಚಿನ್ನದ ಬೆಲೆಯು ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ಐನೂರು ರೂ.ನಷ್ಟು ಇಳಿಕೆಯಾಯಿತು.

ಶೇ. 99.9ರಷ್ಟು ಶುದ್ಧತೆಯ ಚಿನ್ನ ಗುರುವಾರ 10 ಗ್ರಾಂಗೆ 88,200 ರೂ. ಇದ್ದದ್ದು ಶುಕ್ರವಾರ 87,700 ರೂ.ಗೆ ಇಳಿಯಿತು. ಇದು ಕಳೆದ ಎರಡು ವಾರಗಳಲ್ಲೇ ಅತಿ ಕಡಿಮೆ ಬೆಲೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ. ಈ ವರ್ಷದ ಜನವರಿ 1ರಂದು ಚಿನ್ನದ ಬೆಲೆ 79,390 ರೂ. ಇತ್ತು. ಅದೀಗ 87,700 ರೂ.ಗೆ ತಲುಪಿರುವುದರಿಂದ ಪ್ರಸಕ್ತ ವರ್ಷದಲ್ಲಿ ಇಲ್ಲಿಯವರೆಗೆ ಚಿನ್ನದ ಬೆಲೆ 8,310 ರೂ.ನಷ್ಟು, ಅಂದರೆ ಶೇ. 10.5ರಷ್ಟು ಏರಿಕೆಯಾಗದಂತಾಗಿದೆ.

ಶೇ. 99.5ರಷ್ಟು ಶುದ್ಧತೆಯ ಚಿನ್ನ ಗುರುವಾರ 87,800 ರೂ. ಇದ್ದದ್ದು ಶುಕ್ರವಾರ 87,300ಕ್ಕೆ ಇಳಿಯಿತು. ಬೆಳ್ಳಿಯ ದರವು ಸತತ ಮೂರನೇ ದಿನವೂ ಇಳಿದಿದ್ದು, ಶುಕ್ರವಾರ 2,100 ರೂ. ಕಡಿಮೆಯಾಗಿದೆ. ಗುರುವಾರ ಕೆಜಿಗೆ 98,500 ರೂ. ಇದ್ದದ್ದು ಶುಕ್ರವಾರ 96,400 ರೂ. ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net