

ನವದೆಹಲಿ: ಬೇಡಿಕೆ ಕಡಿಮೆಯಾದ ಕಾರಣ ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 600 ರೂ. ಇಳಿಕೆಯಾಗಿದೆ. ಶೇ. 99.9 ಶುದ್ಧತೆಯ ಚಿನ್ನ ಬುಧವಾರ 10 ಗ್ರಾಂಗೆ 1,13,800 ರೂ. ಇದ್ದದ್ದು ಗುರುವಾರ 1,13,200 ರೂ.ಗೆ ತಲುಪಿದೆ.
ಶೇ. 99.5ರಷ್ಟು ಶುದ್ಧತೆಯ ಚಿನ್ನ ಬುಧವಾರ 1,13,300 ರೂ. ಇದ್ದದ್ದು 500 ರೂ. ಕಡಿಮೆಯಾಗಿ 1,12,800 ರೂ.ಗೆ ಇಳಿಕೆಯಾಗಿದೆ. ಬೆಳ್ಳಿಯ ಬೆಲೆ ಚೇತರಿಸಿಕೊಂಡಿದ್ದು, 300 ರೂ. ಏರಿಕೆಯಾಗಿ ಕೆಜಿಗೆ 1,31,500 ರೂ. ಆಗಿದೆ. ಇದು ಬುಧವಾರ 1,670 ರೂ. ಕುಸಿದು 1,31,200 ರೂ.ಗೆ ತಲುಪಿತ್ತು.