ಚಿನ್ನದ ಬೆಲೆ 1,800 ರೂ. ಏರಿಕೆ; 10 ಗ್ರಾಂಗೆ 1.15 ಲಕ್ಷ ರೂ.

gold rates
Published on

ನವದೆಹಲಿ: ದುರ್ಬಲಗೊಂಡ ಅಮೆರಿಕನ್ ಡಾಲರ್ ಮತ್ತು ಫೆಡರಲ್ ರಿಸರ್ವ್ ದರ ಕಡಿತದ ನಿರೀಕ್ಷೆಯಿಂದಾಗಿ ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ 1,800 ರೂ. ಏರಿಕೆಯಾಗಿ 10 ಗ್ರಾಂಗೆ ಹೊಸ ಗರಿಷ್ಠ ಮಟ್ಟವಾದ 1,15,100 ರೂ.ಗೆ ತಲುಪಿದೆ.

ಶೇ. 99.5 ಶುದ್ಧತೆಯ ಚಿನ್ನ ಕೂಡ 1,14,600 ರೂ. ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಇವೆರಡೂ ಸೋಮವಾರ 1,13,300 ರೂ. ಮತ್ತು 1,12,800 ರೂ.ಗೆ ಮುಕ್ತಾಯಗೊಂಡಿದ್ದವು. ಬೆಳ್ಳಿಯ ಬೆಲೆ ಮಂಗಳವಾರ 570 ರೂ. ಏರಿಕೆಯಾಗಿ ಕೆಜಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 1,32,870 ರೂ.ಗೆ ತಲುಪಿದೆ. ಇದು ಸೋಮವಾರ 1,32,300 ರೂ.ಗೆ ಮುಕ್ತಾಯಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net