ಚಿನ್ನ ಮತ್ತೇ ಗಗನಕ್ಕೆ! ಇಂದು ಕೂಡ ಏರಿದ ಗೋಲ್ಡ್​ ಬೆಲೆ

golds
Published on

ನವದೆಹಲಿ: ಏಳು ದಿನಗಳಿಂದ ಇಳಿಮುಖವಾಗಿದ್ದ ಚಿನ್ನದ ಬೆಲೆ ಮಂಗಳವಾರ ಚೇತರಿಸಿಕೊಂಡು 1200 ರೂ. ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಶೇ. 99.9 ಶುದ್ಧತೆಯ ಚಿನ್ನ ಸೋಮವಾರ 10 ಗ್ರಾಂಗೆ ರೂ 97,470 ಇದ್ದದ್ದು ಮಂಗಳವಾರ 98,670 ರೂ. ಆಗಿದೆ. ಶೇ. 99.5 ಶುದ್ಧತೆಯ ಚಿನ್ನ ಮಂಗಳವಾರ 1,100 ರೂ. ಏರಿಕೆಯಾಗಿ 98,150 ರೂ.ಗೆ ತಲುಪಿದೆ.

ಸೋಮವಾರ ಇದು 97,050 ರೂ. ಇತ್ತು. ಬೆಳ್ಳಿಯ ಬೆಲೆ ಮಂಗಳವಾರ 2,000 ರೂ. ಏರಿಕೆಯಾಗಿ ಕೆಜಿಗೆ 1,04,800 ರೂ.ಗೆ ತಲುಪಿದೆ. ಇದು ಸೋಮವಾರ 1,02,800 ರೂ. ಇತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net