

ನವದೆಹಲಿ: ಜಾಗತಿಕ ಮಟ್ಟದಲ್ಲಿ ಬಂಗಾರದ ಬೆಲೆ ಕುಸಿತವಾದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿಯೂ ಮಂಗಳವಾರ ಚಿನ್ನದ ಬೆಲೆ 800 ರೂ.ನಷ್ಟು ಇಳಿಕೆಯಾಗಿದೆ.
ಸೋಮವಾರ 10 ಗ್ರಾಂಗೆ 99,300 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಮಂಗಳವಾರ 98,500 ರೂ.ಗೆ ಇಳಿದಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನದ ದರ ಸೋಮವಾರ 98,800 ರೂ. ಇದ್ದದ್ದು ಮಂಗಳವಾರ 98,000 ರೂ.ಗೆ ಇಳಿದಿದೆ.
ಇದರೊಂದಿಗೆ ಬೆಳ್ಳಿಯ ದರವೂ 1,370 ರೂ. ಕುಸಿದಿದೆ. ಸೋಮವಾರ ಕೆಜಿಗೆ 1,00,370 ರೂ. ಇದ್ದದ್ದು ಮಂಗಳವಾರ 99,000 ರೂ. ಆಗಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ