

ನವದೆಹಲಿ: ದಾಸ್ತಾನುದಾರರು ಹೆಚ್ಚಿನ ಪ್ರಮಾಣದಲ್ಲಿ ಮಾರಾಟಕ್ಕಿಳಿದ ಪರಿಣಾಮವಾಗಿ ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಚಿನ್ನದ ಬೆಲೆ 600 ರೂ. ಇಳಿಕೆಯಾಗಿದೆ. ಗುರುವಾರ 10 ಗ್ರಾಂಗೆ 99,620 ರೂ. ಇದ್ದ ಶೇ. 99.9 ಶುದ್ಧತೆಯ ಚಿನ್ನ ಶುಕ್ರವಾರ 99,020 ರೂ.ಗೆ
ಇಳಿಯಿತು. ಶೇ. 99.5 ಶುದ್ಧತೆಯ ಚಿನ್ನದ ಬೆಲೆ 500 ರೂ. ಕಡಿಮೆಯಾಗಿದೆ. ಇದು ಗುರುವಾರ 99,000 ರೂ. ಇದ್ದದ್ದು ಶುಕ್ರವಾರ
98,500 ರೂ.ಗೆ ಇಳಿದಿದೆ. ಬೆಳ್ಳಿ ಬೆಲೆ ಕೂಡ ಶುಕ್ರವಾರ 1,000 ರೂ. ಕುಸಿತಗೊಂಡು ಕೆಜಿಗೆ 1,04,800 ರೂ.ಗೆ ಇಳಿದಿದೆ. ಗುರುವಾರ ಇದು 1,05,800 ರೂ. ಇತ್ತು.