ಚಿನ್ನದ ಬೆಲೆ ಮತ್ತೆ  400 ರೂ. ಇಳಿಕೆ

6-67dda6b0829a4
Published on

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿನ ನಿರಾಶಾದಾಯಕ ಪ್ರವೃತ್ತಿ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಚಿನ್ನದ ಬೆಲೆ 400 ರೂ. ಇಳಿದಿದೆ. ಗುರುವಾರ 10 ಗ್ರಾಂಗೆ 91,650 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಶುಕ್ರವಾರ 91,250 ರೂ. ಆಗಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ ಗುರುವಾರ 91,200 ರೂ. ಇದ್ದದ್ದು ಶುಕ್ರವಾರ 90,800 ರೂ. ಆಗಿದೆ ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.

ರೂಪಾಯಿ ಬೆಲೆ 36 ಪೈಸೆ ಏರಿಕೆ

ಮುಂಬೈ: ಸ್ಥಳೀಯ ಷೇರು ಮಾರುಕಟ್ಟೆಯಲ್ಲಿನ ತೀವ್ರ ಏರಿಕೆ ಮತ್ತು ವಿದೇಶಿ ಹೂಡಿಕೆಯ ಒಳಹರಿವಿನ ಪ್ರಮಾಣ ಹೆಚ್ಚಳದ ಹಿನ್ನೆಲೆಯಲ್ಲಿ ಅಮೆರಿಕದ ಡಾಲರ್ ವಿರುದ್ಧ ಭಾರತೀಯ ರೂಪಾಯಿಯ ಬೆಲೆ ಶುಕ್ರವಾರ 36 ಪೈಸೆಯಷ್ಟು ಹೆಚ್ಚಳವಾಗಿ 86ಕ್ಕೆ ತಲುಪಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net