

ನವದೆಹಲಿ: ದಾಸ್ತಾನುದಾರರು ಮತ್ತು ಚಿಲ್ಲರೆ ವ್ಯಾಪಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟಕ್ಕಿಳಿದ ಪರಿಣಾಮ, ಚಿನ್ನದ ಬೆಲೆಯು ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ 1200 ರೂ.ಗಳಷ್ಟು ಕುಸಿದಿದೆ.
ಕಳೆದ ಶುಕ್ರವಾರ 1300 ರೂ. ಏರಿ 89,400 ರೂ.ಗೆ ತಲುಪುವ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟದ ದಾಖಲೆ ಬರೆದಿದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನ ಸೋಮವಾರ 88,200 ರೂ.ಗೆ ಇಳಿಯಿತು. ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಶುಕ್ರವಾರ 89 ಸಾವಿರ ರೂ. ಇದ್ದದ್ದು, ಸೋಮವಾರ 87,800 ರೂ.ಗೆ ಇಳಿಯಿತು. ಬೆಳ್ಳಿಯ ಬೆಲೆ ಸೋಮವಾರ 1800 ರೂ. ಕುಸಿದು 98200 ರೂ.ಗೆ ತಲುಪಿತು. ಶುಕ್ರವಾರ ಇದು 1 ಲಕ್ಷ ರೂ. ತಲುಪಿತ್ತು.