ಸೋರುತ್ತಿದೆ ಶಬರಿಮಲೆ ದೇವಸ್ಥಾನದ ಸ್ವರ್ಣಲೇಪಿತ ಮಾಳಿಗೆ!

Sabarimala (2)
Published on

ಕೇರಳ: ಪವಿತ್ರ ಕ್ಷೇತ್ರವಾಗಿರುವ ಶಬರಿಮಲೆಯ ಶ್ರೀಅಯ್ಯಪ್ಪ ದೇವಸ್ಥಾನದ ಗರ್ಭಗುಡಿಯ ಸ್ವರ್ಣಲೇಪಿತ ಮಾಳಿಗೆಯು ಸೋರಲಾರಂಭಿಸಿದೆ. ಹೀಗಾಗಿ ಆಡಳಿತ ಮಂಡಳಿಯು ಶೀಘ್ರ ಇದರ ದುರಸ್ತಿ ಮಾಡಲು ನಿರ್ಧರಿಸಿದೆ.

ದೇವಸ್ಥಾನದ ಆಡಳಿತ ನಡೆಸುತ್ತಿರುವ ಟ್ರಾವಂಕೂರ್ ದೇವಸ್ವಂ ಬೋರ್ಡ್, ದೇವಳದ ಸ್ವರ್ಣಲೇಪಿತ ಮಾಳಿಗೆಯ ಮುಂಭಾಗದ ಒಂದು ಮೂಲೆಯಲ್ಲಿ ಸೋರುತ್ತಿದೆ. ಆದರೆ ಇದು ದೊಡ್ಡ ಸಮಸ್ಯೆಯಲ್ಲ, ಶೀಘ್ರದಲ್ಲೇ ಇದನ್ನು ಸರಿಪಡಿಸಲಾಗುವುದು. ಆಗಸ್ಟ್ 3ರಂದು ಅದನ್ನು ತೆರೆದು ಪರಿಶೀಲಿಸಿ ದುರಸ್ತಿ ಮಾಡಲಾಗುವುದು ಎಂದು ತಿಳಿಸಿದೆ.

ಸದ್ಯ ಈ ಸೋರಿಕೆಯ ಪರಿಣಾಮವಾಗಿ ದ್ವಾರಪಾಲಕ ಮೂರ್ತಿಗಳ ಮೇಲೆ ನೀರು ಬೀಳುತ್ತಿದೆ. ಆಗಸ್ಟ್ 3ರಂದು ಅದನ್ನು ತೆರೆದು ನೋಡಲು ನಿರ್ಧರಿಸಲಾಗಿದೆ. ಆಗ ಅದರ ತೀವ್ರತೆ ಎಷ್ಟಿದೆ ಎಂದು ತಿಳಿದು ಬರಲಿದೆ. ಅದಾಗ್ಯೂ ಟಿಡಿಬಿ ಖರ್ಚಿನಲ್ಲೇ ಪೂರ್ತಿ ದುರಸ್ತಿ ಕೈಗೊಳ್ಳಲಾಗುವುದು ಎಂದು ಬೋರ್ಡ್ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net