ಮನೆ ಮಾರಾಟ ಮಾಡಿದ ಮಾರ್ಕ್​ ಜುಕರ್​ಬರ್ಗ್​; ಆ ನಗರದಲ್ಲೇ ಇದು ಅತ್ಯಧಿಕ ಬೆಲೆಯ ಗೃಹ!

Mark
Published on

ನವದೆಹಲಿ: ಸೋಷಿಯಲ್ ಮೀಡಿಯಾ ಜಗತ್ತಿನ ಮುಂಚೂಣಿ ಆ್ಯಪ್​ಗಳಲ್ಲಿ ಒಂದಾಗಿರುವ ಫೇಸ್​ಬುಕ್​ನ ಸಹ-ಸಂಸ್ಥಾಪಕ ಮಾರ್ಕ್​ ಜುಕರ್​ಬರ್ಗ್ ತಮ್ಮ ಮನೆಯೊಂದನ್ನು ಮಾರಾಟ ಮಾಡಿದ್ದಾರೆ. ವಿಶೇಷವೆಂದರೆ ಆ ನಗರದಲ್ಲೇ ಇದು ಈ ವರ್ಷದ ಅತ್ಯಧಿಕ ಬೆಲೆಯ ಮನೆ ಮಾರಾಟ ಎಂದು ಹೇಳಲಾಗಿದೆ.

ಮೆಟಾ ಕಂಪನಿಯ ಸಿಇಒ ಆಗಿರುವ ಮಾರ್ಕ್ ಜುಕರ್​ಬರ್ಗ್ ಸ್ಯಾನ್ ಫ್ರಾನ್ಸಿಸ್ಕೊದಲ್ಲಿರುವ ಈ ಮನೆಯನ್ನು ಸುಮಾರು 250 ಕೋಟಿ ರೂ. (31 ಮಿಲಿಯನ್​ ಡಾಲರ್​)ಗೆ ಮಾರಾಟ ಮಾಡಲಾಗಿದೆ. ಇದು ಸ್ಯಾನ್​ಪ್ರಾನ್ಸಿಸ್ಕೊದಲ್ಲಿ ಈ ವರ್ಷದ ಅತಿ ದುಬಾರಿ ದರಕ್ಕೆ ಮಾರಾಟವಾದ ಮನೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಮಾರ್ಕ್​ ಜುಕರ್​ಬರ್ಗ್​ ಈ ಮನೆಯನ್ನು 2012ರಲ್ಲಿ 80 ಕೋಟಿ ರೂ. (10 ಮಿಲಿಯನ್ ಡಾಲರ್​) ಕೊಟ್ಟು ಖರೀದಿಸಿದ್ದರು. ಏಳು ಸಾವಿರ ಚದರಡಿಯ ಈ ಮನೆ ಸ್ಯಾನ್​​ಫ್ರಾನ್ಸಿಸ್ಕೊದ ಲಿಬರ್ಟಿ ಹಿಲ್​ನಲ್ಲಿದೆ. ಕಾಲು ಎಕರೆ ಜಾಗದಲ್ಲಿರುವ ಈ ಮನೆಯನ್ನು 1928ರಲ್ಲಿ ನಿರ್ಮಾಣ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net