17 ಲಕ್ಷ ರೂ.ಮೌಲ್ಯದ ಚಿನ್ನದ ತುಂಡುಗಳು ವಶ

Crime Logo
Published on

ಬೆಂಗಳೂರು: ಕುವೈತ್‌ನಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದ ಪ್ರಯಾಣಿಕನೊಬ್ಬನ ಬಳಿ ಕಳ್ಳಸಾಗಾಣಿಕೆ ಮೂಲಕ ತರುತ್ತಿದ್ದ 17 ಲಕ್ಷ ರೂ. ಮೌಲ್ಯದ ೨೭೯.೫ ಗ್ರಾಂ ತೂಕದ ಚಿನ್ನದ ತುಂಡುಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಫೆ.೧೫ರಂದು ಕುವೈತ್‌ನಿಂದ ಭಾರತೀಯ ವ್ಯಕ್ತಿಯೊಬ್ಬ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಆಗ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಆತನ ಬಳಿ ಇದ್ದ ಅಲಂಕೃತ ಅಗರ್‌ಬತ್ತಿ ಕಂಟೈನರ್ ಪರಿಶೀಲಿಸಿದಾಗ ಆತ ಬಚ್ಚಿಟ್ಟಿದ್ದ ಚಿನ್ನದ ಕಚ್ಚಾ ತುಂಡುಗಳು ಪತ್ತೆಯಾಗಿವೆ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಮೌಲ್ಯ ೧೭,೨೩,೧೧೭ರೂ. ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net