ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ; ವಿಶ್ಲೇಷಕರು ಕೊಟ್ಟ ಕಾರಣ ಹೀಗಿದೆ | Gold

Gold
Published on

Gold: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಸರಕುಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ಸುಂಕವನ್ನು ಘೋಷಿಸಿದ ಬಳಿಕ ಹೂಡಿಕೆದಾರರು ಸುರಕ್ಷಿತ ಸ್ವತ್ತುಗಳತ್ತ ಮುಖ ಮಾಡಿದ್ದರಿಂದ, ಗುರುವಾರ (ಆಗಸ್ಟ್ 7) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 24 ಕ್ಯಾರೆಟ್ ಗೋಲ್ಡ್ ಬೆಲೆ 3,600 ರೂ. ದಿಢೀರ್ ಏರಿಕೆಯಾಗಿ 1,02,620ಕ್ಕೆ ತಲುಪಿದೆ.

ಅಖಿಲ ಭಾರತ ಸರಾಫಾ ಸಂಘದ ಪ್ರಕಾರ, 24 ಕ್ಯಾರೆಟ್ ಗೋಲ್ಡ್ ಬೆಲೆ ಬುಧವಾರ 10 ಗ್ರಾಂಗೆ 99,020 ರೂ. ಇತ್ತು.

ದೆಹಲಿಯಲ್ಲಿ ಗುರುವಾರ ಶೇ.99.5ರಷ್ಟು ಶುದ್ಧತೆಯ ಚಿನ್ನದ ಬೆಲೆ 3,600 ರೂ. ಏರಿಕೆಯಾಗಿ 10 ಗ್ರಾಂಗೆ (ಎಲ್ಲಾ ತೆರಿಗೆಗಳು ಸೇರಿದಂತೆ) 1,02,200 ರುಪಾಯಿ ತಲುಪುವ ಮೂಲಕ ಗರಿಷ್ಠ ಮಟ್ಟಕ್ಕೇರಿದೆ.

ಶೇ.25ರಷ್ಟು ಸುಂಕವನ್ನು ವಿಧಿಸಿರುವ ಟ್ರಂಪ್ ನಿರ್ಧಾರ, ಎರಡು ಆರ್ಥಿಕತೆಗಳ ನಡುವಿನ ವ್ಯಾಪಾರ ಉದ್ವಿಗ್ನತೆಯನ್ನು ತೀವ್ರಗೊಳಿಸಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸರಕುಗಳ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಅಭಿಪ್ರಾಯಿಸಿದ್ದಾರೆ. ಇದಷ್ಟೇ ಅಲ್ಲದೆ ಗುರುವಾರ ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1,500 ರೂ. ಏರಿಕೆಯಾಗಿ 1,14,000 ರೂ.ಗೆ ತಲುಪಿದೆ. ಬುಧವಾರ ಬೆಳ್ಳಿ ಪ್ರತಿ ಕೆಜಿಗೆ 1,12,500 ರೂ. ಎಂದು ವರದಿಯಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net