ಚಿನ್ನ 1,400, ಬೆಳ್ಳಿ 3000 ರೂ. ಇಳಿಕೆ

gold rates
Published on

ನವದೆಹಲಿ: ಜಾಗತಿಕ ಮಾರುಕಟ್ಟೆಯ ದುರ್ಬಲ ಪ್ರವೃತ್ತಿ ಮತ್ತು ದಾಸ್ತಾನುದಾರರಿಂದ ಮಾರಾಟ ಹೆಚ್ಚಳದಿಂದಾಗಿ ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಕುಸಿದಿದೆ.

ಬುಧವಾರ 10 ಗ್ರಾಂಗೆ 1,01,020 ರೂ. ಇದ್ದ ಶೇ. 99.9 ಶುದ್ಧತೆಯ ಚಿನ್ನ ಗುರುವಾರ 1,400 ರೂ. ಕುಸಿದು 99,620 ರೂ.ಗೆ ತಲುಪಿದೆ. 1,00,450 ರೂ. ಇದ್ದ ಶೇ. 99.5 ಶುದ್ಧತೆಯ ಚಿನ್ನ 1,200 ರೂ. ಕುಸಿದು 99,250 ರೂ.ಗೆ ಮುಟ್ಟಿದೆ. ಬೆಳ್ಳಿ ಬೆಲೆ ಪ್ರತಿ ಕೆಜಿಗೆ ಬುಧವಾರ 1,18,000 ರೂ. ಇದ್ದದ್ದು ಗುರುವಾರ 3,000 ರೂ. ಕುಸಿದು 1,15,000 ರೂ. ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net