ಡಿಸಿಎಂ-ಶಾಸಕರಿಗೆ ಉಡುಗೊರೆಯಾಗಿ ಬಂತು 3 ಚಿನ್ನದ ಕಿರೀಟಗಳು! ಆದ್ರೂ ಸಿಡಿಮಿಡಿಗೊಂಡ ಶಾಸಕ

Gold Crown Gift
Published on

ವಿಜಯಪುರ: ಡಿಸಿಎಂ ಗೋವಿಂದ ಕಾರಜೋಳ, ಶಾಸಕರಾದ ಶಿವಾನಂದ ಪಾಟೀಲ್ ಮತ್ತು ಎಂ.ಬಿ.ಪಾಟೀಲ್ ಅವರಿಗೆ ಗ್ರಾಮಸ್ಥರು ಚಿನ್ನದ ಕಿರೀಟಗಳನ್ನು ತೊಡಿಸಿ ಸಂಭ್ರಮಿಸಿದ್ದಾರೆ.

ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ಸೋಮವಾರ ವಿವಿಧ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಒಟ್ಟು 210 ಗ್ರಾಂ ತೂಕದ ಮೂರು ಚಿನ್ನದ ಕಿರೀಟಗಳನ್ನು ತಂದಿದ್ದ ಗ್ರಾಮಸ್ಥರು ತಮ್ಮ ನೆಚ್ಚಿನ ನಾಯಕರಿಗೆ ತೊಡಿಸಲು ಹೋದರು. ಕಿರೀಟವನ್ನು ಗಿಫ್ಟ್ ಪಡೆಯಲು ಮೂವರು ನಾಯರು ನಿರಾಕರಿಸಿದರಾದರೂ ಗ್ರಾಮಸ್ಥರು ಮಾತ್ರ ಪಟ್ಟು ಸಡಿಸಲಿಲ್ಲ.

ಒತ್ತಾಯಪೂರ್ವಕವಾಗಿ ಕಿರೀಟ ಹಾಕಿದ್ದಕ್ಕೆ ಬೇಸರಗೊಂಡು ಶಾಸಕ ಶಿವಾನಂದ ಪಾಟೀಲ್ ಸಮಾರಂಭದಿಂದ ಹೊರನಡೆದರು. ಪ್ರವಾಹ, ಕೋವಿಡ್ ಸಂಕಷ್ಟದ ಮಧ್ಯೆಯೂ ಗ್ರಾಮಸ್ಥರು ಚಿನ್ನದ ಕಿರೀಟ ನೀಡಿದ್ದಕ್ಕೆ ಶಾಸಕರು ಬೇಸರಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net