'ಚಿನ್ನ' ಚಿಂತೆಗೆ ದೂಡಿತು 'ಇನ್ನ'! ಸಾರ್ವಕಾಲಿಕ ದಾಖಲೆ ಮುರಿದ ಗೋಲ್ಡ್ ಬೆಲೆ; ಹೀಗಿದೆ ಇಂದಿನ ದರಪಟ್ಟಿ | Gold Rates

Gold
Published on

Gold Rates: ರಾಕೆಟ್​ ವೇಗದಲ್ಲಿ ಸಾಗುತ್ತಿರುವ ಚಿನ್ನದ ಬೆಲೆಗಳು ಇದೀಗ 1 ಲಕ್ಷ ರೂ. ಗಡಿದಾಟಿ ಮುನ್ನುಗ್ಗುತ್ತಿರುವುದು ಸದ್ಯ ಚಿನ್ನದಂತ ಗ್ರಾಹಕರನ್ನು ತೀವ್ರ ಚಿಂತೆಗೆ ದೂಡಿದೆ. ಪ್ರಸ್ತುತ, ಮದುವೆ ಮತ್ತು ಸರಣಿ ಶುಭ ಸಮಾರಂಭಗಳ ಸೀಸನ್. ಇಂಥಾ​ ಸಮಯದಲ್ಲೇ ಗೋಲ್ಡ್ ಬೆಲೆಗಳು ಆಕಾಶಕ್ಕೆ ಮುತ್ತಿಡುತ್ತಿರುವುದು ಕೊಳ್ಳುವವರನ್ನು ಖರೀದಿಯಿಂದ ದೂರ ಸರಿಯುವಂತೆ ಮಾಡಿದೆ. ಇದರ ಪರಿಣಾಮವಾಗಿ, ದೇಶದಲ್ಲಿ ಚಿನ್ನದ ಬೆಲೆ ಇದೀಗ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.

ಭೌಗೋಳಿಕ ರಾಜಕೀಯ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುರಕ್ಷಿತ ಸ್ವತ್ತುಗಳತ್ತ ಮುಖ ಮಾಡುತ್ತಿರುವುದರಿಂದ ಚಿನ್ನದ ಬೇಡಿಕೆ ಇನ್ನಷ್ಟು ಹೆಚ್ಚುತ್ತಿದೆ. ದೇಶಾದ್ಯಂತ ಚಿನ್ನದ ಬೆಲೆಗಳು ತೀವ್ರವಾಗಿ ಏರಿಕೆ ಕಂಡಿವೆ. ಸೋಮವಾರ (ಸೆ.08) ಸ್ವಲ್ಪ ಕುಸಿದಿದ್ದ ಚಿನ್ನದ ಬೆಲೆ ಇಂದು ಗಣನೀಯವಾಗಿ ಹೆಚ್ಚಾಗಿದೆ. ಇಂದು ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1360 ರೂ. ಏರಿಕೆಯಾಗಿದೆ. ಇನ್ನು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 1250 ರೂ. ಹೆಚ್ಚಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಪ್ರತಿ ಔನ್ಸ್‌ಗೆ 20 ಡಾಲರ್​ನಷ್ಟು ಏರಿಕೆಯಾಗಿದೆ. ಪರಿಣಾಮವಾಗಿ, ಒಂದು ಔನ್ಸ್ ಚಿನ್ನ ಪ್ರಸ್ತುತ 3,655 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ. ಇಂದು ಬೆಳ್ಳಿಯ ಬೆಲೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ

  • ನವದೆಹಲಿಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,01,250 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 1,10,440 ರೂ. ಆಗಿದೆ.
  • ಮುಂಬೈ, ಬೆಂಗಳೂರು, ಚೆನ್ನೈ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,01,100 ರೂ. ಆಗಿದ್ದರೆ, 24 ಕ್ಯಾರೆಟ್ ಬೆಲೆ 1,10,290 ರೂ. ಆಗಿದೆ.
  • ಇನ್ನು ಹೈದರಾಬಾದ್, ವಿಜಯವಾಡ, ವಿಶಾಖಪಟ್ಟಣದಲ್ಲಿ, 22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 1,01,100 ರೂ. ಇದ್ದರೆ, 24 ಕ್ಯಾರೆಟ್ ಬೆಲೆ 1,10,290 ರೂ. ಆಗಿದೆ.

ಬೆಳ್ಳಿ ಬೆಲೆ ಸ್ಥಿರ

  • ದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,30,000 ರೂ. ಆಗಿದೆ.
  • ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,40,000 ರೂ. ಆಗಿದೆ.
  • ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,40,000 ರೂ. ಇದೆ,(ಏಜೆನ್ಸೀಸ್).

ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ದಯವಿಟ್ಟು ಗಮನಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net