2 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿಗಳು ವಿಮಾನದ ಶೌಚಾಲಯದಲ್ಲಿ ಪತ್ತೆ!

Gold Bars Worth 2 Crore
Published on

ನವದೆಹಲಿ: ಕಸ್ಟಮ್ಸ್ ಅಧಿಕಾರಿಗಳು ಇಂದು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ವಿಮಾನವೊಂದರ ಶೌಚಾಲಯದಿಂದ ಸುಮಾರು 2 ಕೋಟಿ ಮೌಲ್ಯದ ನಾಲ್ಕು ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ವಿಮಾನದ ವಾಶ್‌ರೂಮ್‌ನಲ್ಲಿ ಸ್ಥಾಪಿಸಲಾದ ಸಿಂಕ್‌ನ ಕೆಳಗೆ ಟೇಪ್‌ನಿಂದ ಅಂಟಿಸಲಾಗಿದ್ದ ಬೂದು ಬಣ್ಣದ ಚೀಲವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಚೀಲದಲ್ಲಿ ಸುಮಾರು 3969 ಗ್ರಾಂ ತೂಕದ ನಾಲ್ಕು ಆಯತಾಕಾರದ ಚಿನ್ನದ ಬಾರ್‌ಗಳನ್ನು ಹೊಂದಿತ್ತು. ಆಯತಾಕಾರದ ಚಿನ್ನದ ಬಾರ್‌ಗಳ ಬೆಲೆ 1,95,72,400 ರೂ. ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

1962 ರ ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 110 ರ ಅಡಿಯಲ್ಲಿ, ಪ್ಯಾಕಿಂಗ್ ಸಾಮಗ್ರಿಗಳೊಂದಿಗೆ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net