ಇಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆ;ಹೀಗಿದೆ ಇಂದಿನ ದರ

gold
Published on

ಬೆಂಗಳೂರು: ಏರಿಕೆ-ಇಳಿಕೆ ಜೊತೆ ಹಾವು-ಏಣಿ ಆಟ ನಡೆಸುತ್ತಿರುವ ಬಂಗಾರದ ಬೆಲೆ ನಿನ್ನೆಗಿಂತ ಅಲ್ಪ ಕುಸಿತ ಕಂಡಿದೆ. ಕರ್ನಾಟಕದಲ್ಲಿ ಚಿನ್ನದ ದರ ಕಳೆದ ಕೆಲವು ದಿನಗಳ ದರ ಹೆಚ್ಚಳಕ್ಕೆ ಹೋಲಿಸಿದರೆ ಇಂದು ಕೊಂಚ ಇಳಿಕೆ ಕಂಡಿದೆ. ಹಾಗಾದರೆ ನಾವಿಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಎಷ್ಟು? ಎಷ್ಟೇಲ್ಲಾ ಏರಿಕೆ ಕಂಡಿದೆ ಎಂಬುದರ ಫುಲ್‌ ಡಿಟೇಲ್ಸ್‌ ತಿಳಿಯೋಣ...

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :

22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,050 ರೂ.

24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 60.150 ರೂ.

ಬೆಳ್ಳಿ ಬೆಲೆ 1 ಕೆಜಿ: 76,500 ರೂ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ​ ಚಿನ್ನದ ಬೆಲೆ 55,150 ರೂಪಾಯಿ ಇತ್ತು. ಆದರೆ ಇಂದು 55,050 ರೂಪಾಯಿ ಆಗಿದೆ. ಇಂದು ಬರೋಬ್ಬರಿ 100 ರೂ. ಇಳಿಕೆಯಾಗಿದೆ.

ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 60.160 ರೂಪಾಯಿ ಇತ್ತು. ಆದರೆ ಇಂದು 60.160 ರೂಪಾಯಿ ಆಗಿದೆ. ಇಂದು ಬರೋಬ್ಬರಿ 110 ರೂ. ಹೆಚ್ಚಾಗಿದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

ಬೆಂಗಳೂರು: 55,050 ರೂ.

ಮುಂಬೈ: 55,050 ರೂ.

ದೆಹಲಿ: 55,200 ರೂ

ಕೇರಳ: 55,050 ರೂ.

ಆಭರಣ ರೂಪವಾಗಿ ಹಾಗೂ ಹೂಡಿಕೆಯ ರೂಪವಾಗಿ ಚಿನ್ನ ಹಾಗೂ ಬೆಳ್ಳಿ ಎಂದೆಂದಿಗೂ ಪ್ರಾಶಸ್ತ್ಯ ಪಡೆದುಕೊಂಡಿವೆ. ಹಬ್ಬದ ಸೀಸನ್‌ಗಳಲ್ಲಂತೂ ಇವುಗಳಿಗೆ ಅಪಾರ ಬೇಡಿಕೆ ಇರುತ್ತದೆ. ಬೆಲೆ ಏರಿಕೆ ಹೇಗಿದ್ದರೂ ಚಿನ್ನ ಬೆಳ್ಳಿಯ ಮಾರಾಟ ಬಲು ಜೋರಾಗಿಯೇ ನಡೆಯುತ್ತದೆ ಹಾಗಾಗಿಯೇ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವುಗಳ ಮೌಲ್ಯ ಏರಿಕೆಯಲ್ಲಿರುತ್ತದೆ.

-----------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net