

ಬೆಂಗಳೂರು: ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ನಿರಂತರ ಹಾವು ಏಣಿ ಆಟ ಶುರು ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯ ಮೇಲಿನ ಒತ್ತಡದಿಂದಾಗಿ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಅಗ್ಗವಾಗುತ್ತಿದೆ. ಚಿನ್ನ, ಬೆಳ್ಳಿ ಆಭರಣ ಖರೀದಿಗೆ ಪ್ಲ್ಯಾನ್ ಮಾಡಿದ್ದೀರಾ.. ಬಂಗಾರ, ಬೆಳ್ಳಿ ದರ ಯಾವ್ಯಾವ ನಗರಗಳಲ್ಲಿ ಎಷ್ಟಿದೆ.. ಎಲ್ಲಿ ಹೆಚ್ಚಾಗಿದೆ, ಎಲ್ಲಿ ಕಡಿಮೆಯಾಗಿದೆ ಅನ್ನೋ ಗೊಂದಲವೇ..? ಹಾಗಾದ್ರೆ, ಇಂದಿನ ಚಿನ್ನ, ಬೆಳ್ಳಿ ಬೆಲೆ ವಿವರ ಹೀಗಿದೆ..
ಬೆಳ್ಳಿ ಬೆಲೆ 1 ಕೆಜಿ: 75,750 ರೂ.
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60.000 ರೂ.
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,000 ರೂ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ :
ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 59.890 ರೂಪಾಯಿ ಇತ್ತು. ಆದರೆ ಇಂದು 60.000 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 54,900 ರೂಪಾಯಿ ಇತ್ತು. ಆದರೆ ಇಂದು 55,000 ರೂಪಾಯಿ ಆಗಿದೆ.
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ):
ಕೇರಳ: 55,000 ರೂ.
ದೆಹಲಿ: 55,150 ರೂ.
ಮುಂಬೈ: 55,000 ರೂ.
ಬೆಂಗಳೂರು: 55,000 ರೂ.
ಬಂಗಾರ, ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯ ವಿದ್ಯಾಮಾನ. ಚಿನ್ನ ಆರ್ಥಿಕ ಸುರಕ್ಷತೆಗೆ ಬಲು ವಿಶ್ವಾಸಪೂರ್ಣ ಸಾಧನವಾಗಿರುವುದರಿಂದ ಬಹಳಷ್ಟು ಜನರು ಇದರ ಖರೀದಿಗೆ ಹಣ ಹೂಡಿಕೆ ಮಾಡುತ್ತಲೇ ಇರುತ್ತಾರೆ. ಚಿನ್ನದ ದರ ಯಾವಾಗ ಇಳಿಕೆ ಆಗುತ್ತೋ ಅಂದೇ ಖರೀದಿಸುವುದು ಉತ್ತಮ ಎನ್ನುವುದು ಎಲ್ಲರ ಅಭಿಪ್ರಾಯ.