ನೀರುಮಾರ್ಗದಲ್ಲಿ ಗೋಕುಲೋತ್ಸವಕ್ಕೆ ಚಾಲನೆ

mng--9 april Gokulotsava
Published on

ಮಂಗಳೂರು: ಮಕ್ಕಳಿಗೆ ಎಳವೆಯಲ್ಲೇ ಉತ್ತಮ ಸಂಸ್ಕಾರ, ಸಂಸ್ಕೃತಿ, ಆಚಾರ ವಿಚಾರಗಳನ್ನು ಕಲಿಸುವ ಮೂಲಕ ಅವರನ್ನು ಭವಿಷ್ಯದ ಸತ್ಪ್ರಜೆಗಳಾಗಿ ರೂಪಿಸುವ ಜತೆಗೆ ಸಮೃದ್ಧ ರಾಷ್ಟ್ರ ಕಟ್ಟುವ ಚಿಂತನೆ ಬಿತ್ತಬೇಕು ಎಂದು ಕದ್ರಿ ಬಾಲಯಕ್ಷ ಕೂಟದ ನಿರ್ದೇಶಕ ರಾಮಚಂದ್ರ ಭಟ್ ಎಲ್ಲೂರು ಹೇಳಿದರು.


ನೀರುಮಾರ್ಗದಲ್ಲಿ ಪಡು ಶ್ರೀ ವ್ನಿೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಭಾನುವಾರ ನಡೆದ ಗೋಕುಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಬಾಲ್ಯದಲ್ಲೇ ಮಕ್ಕಳಿಗೆ ಉತ್ತಮ ಸಂಸ್ಕಾರ ಸಿಕ್ಕರೆ ಅವರ ಪಾಶ್ಚಾತ್ಯ ಸಂಸ್ಕೃತಿಯತ್ತ ಒಲವು ತೋರಲು ಸಾಧ್ಯವಿಲ್ಲ. ಯಕ್ಷಗಾನ, ಭರತನಾಟ್ಯ, ಭಜನೆಗಳಲ್ಲಿ ಅಗಾಧವಾದ ಶಕ್ತಿಯಿದೆ. ವಿಷ್ಣುಸಹಸ್ರನಾಮ ವೇದ ನಮಗೆ ಕೊಟ್ಟ ದೊಡ್ಡ ಕೊಡುಗೆ, ಹನುಮಾನ್ ಚಾಲೀಸ್ ಸ್ಥೈರ್ಯದ ಸಂಕೇತ. ನಮ್ಮ ಮನೆ ಮಕ್ಕಳು ಅದರತ್ತ ಗಮನಕೊಡಲು ಪ್ರೇರೇಪಿಸಲು ಪೋಷಕರು ಗಮನಹರಿಸಿದಾಗ ಉತ್ತಮ ಸಂಸ್ಕಾರದ ಮನೆ, ಸಮಾಜ ನಿರ್ಮಾಣ ಸಾಧ್ಯ ಎಂದರು.


ನೀರುಮಾರ್ಗ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶೋದಾ ಜೆ. ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಶಶಿಕಲಾ, ಐಡಿಯಲ್ ಕ್ಯಾಟರರ್ಸ್‌ ಮಾಲೀಕ ರಾಜೇಶ್ ಅಮೀನ್ ನೀರುಮಾರ್ಗ, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಕಾಪೆಟ್ಟು ಪಾಂಡುರಂಗ ಭಜನಾ ಮಂದಿರ ಅಧ್ಯಕ್ಷ ಲೋಕನಾಥ ಕೋರೆಟ್ಟು, ಭಜನಾ ತರಬೇತಿದಾರರಾದ ದಿನ್‌ರಾಜ್ ಕಳವಾರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೈಲಜಾ, ನೀರುಮಾರ್ಗ ವಲಯ ಬಂಟರ ಸಂಘದ ಅಧ್ಯಕ್ಷ ಗೋಕುಲ್‌ದಾಸ್ ಶೆಟ್ಟಿ, ನೀರುಮಾರ್ಗ ಜಿ.ಆರ್. ಮೆಡಿಕಲ್ ಕಾಲೇಜಿನ ಡಾ.ಶ್ಯಾಮ್‌ಸುಂದರ್, ಶ್ರೀ ವ್ನಿೇಶ್ವರ ಗ್ರಾಮೀಣಾಭಿವೃದ್ಧಿ ಸಮಿತಿ ಅಧ್ಯಕ್ಷ ಅರುಣ್ ಬಿತ್ತ್‌ಪಾದೆ, ಸಮಿತಿಯ ಮಾಜಿ ಅಧ್ಯಕ್ಷ ನಾಗೇಶ್ ಪಿಲ್ಚಂಡಿ, ಮಹಿಳಾ ಸಹಸಂಚಾಲಕರಾದ ಪುಷ್ಪಾವತಿ, ಯಶಲಾಕ್ಷಿ ಉಪಸ್ಥಿತರಿದ್ದರು.


ಸಮಿತಿಯ ಸಲಹಾ ಸಮಿತಿ ಸದಸ್ಯ ವಿಜಯ್ ಕೋಟ್ಯಾನ್ ಪಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೀರ್ತಿರಾಜ್ ಪಡು ಕಾರ್ಯಕ್ರಮ ನಿರೂಪಿಸಿದರು.
ಗೋಕುಲೋತ್ಸವ ವಿಶೇಷತೆ: ಗೋಕುಲೋತ್ಸವ ಉದ್ಘಾಟನೆ ಬಳಿಕ ಗ್ರಾಮೀಣ ಆಟೋಟ ಸ್ಪರ್ಧೆಗಳು, ತುಳುನಾಡಿನ ವೈವಿಧ್ಯ ತಿಂಡಿ ತಿನಸುಗಳು, ಗ್ರಾಮೀಣ ಸಂತೆ ಸೇರಿದಂತೆ ತುಳುನಾಡಿನ ಹಳ್ಳಿಸೊಗಡನ್ನು ಸಾರುವ ವೈವಿಧ್ಯತೆಗಳು ಗಮನಸೆಳೆದವು. ಕಾರ್ಯಕ್ರಮದಲ್ಲಿ ಜಿ.ಆರ್. ಮೆಡಿಕಲ್ ಕಾಲೇಜಿನಿಂದ ಉಚಿತ ವೈದ್ಯಕೀಯ ಶಿಬಿರ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net