ಗುರುರಾಘವೇಂದ್ರ, ವಶಿಷ್ಟ ಸೌಹಾರ್ದ ಬ್ಯಾಂಕ್ ಹಗರಣಗಳ ತನಿಖೆ ಸಿಬಿಐಗೆ ವಹಿಸಲು ಸರ್ಕಾರ ನಿರ್ಧಾರ

cbi
Published on

ಬೆಂಗಳೂರು: ಕಳೆದ ಕೆಲವು ಕಾಲದಿಂದ ಸುದ್ದಿಯಲ್ಲಿರುವ ಎರಡು ಪ್ರಮುಖ ಸಹಕಾರ ಬ್ಯಾಂಕ್​ಗಳ ಹಗರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಳ್ಳುವ ಲಕ್ಷಣಗಳು ಗೋಚರಿಸಿವೆ. ಇಂದು ವಿಕಾಸಸೌಧದಲ್ಲಿ ನಡೆದ ಮಹತ್ವದ ಸಭೆಯೊಂದರಲ್ಲಿ ಈ ಕುರಿತು ನಿರ್ಧಾರ ತಳೆಯಲಾಗಿದೆ.

ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರಗಳು ಮತ್ತು ಪುನಃಶ್ಚೇತನ ಹಾಗೂ ವಶಿಷ್ಟ ಸೌಹಾರ್ದ ಸಹಕಾರಿ ಬ್ಯಾಂಕ್ ಅವ್ಯವಹಾರಗಳ ಕುರಿತು ಇಂದು ಸಹಕಾರ ಸಚಿವ ಎಸ್​.ಟಿ. ಸೋಮಶೇಖರ್ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಪರಾಮರ್ಶೆ ಸಭೆ ನಡೆದಿದೆ. ಈ ಸಭೆಯಲ್ಲಿ ಹಲವಾರು ವಿಚಾರಗಳನ್ನು ಚರ್ಚಿಸಿ ಕೆಲವು ನಿರ್ಧಾರ ಕೈಗೊಳ್ಳಲಾಗಿದೆ.

ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್​, ವಶಿಷ್ಠ ಸೌಹಾರ್ದ ಬ್ಯಾಂಕ್ ಮಾತ್ರವಲ್ಲದೆ ಇತರೆ ಯಾವುದೇ ಬ್ಯಾಂಕ್​ಗಳಲ್ಲಿ ಅವ್ಯವಹಾರಗಳು ನಡೆದಿದ್ದರೆ ಆ ಪ್ರಕರಣಗಳನ್ನು ಸಹ ಸಿಬಿಐ ತನಿಖೆಗೆ ವಹಿಸಲು ಸರ್ಕಾರ ಶಿಫಾರಸು ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ನಿರ್ಣಯ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net