

GOING DOWN: ಜೂ.12ರ ಮಧ್ಯಾಹ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 242 ಪ್ರಯಾಣಿಕರು ಮತ್ತು ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿದ್ದ ಬೋಯಿಂಗ್ 787 ಡ್ರೀಮ್ಲೈನರ್ (AI-171) ವಿಮಾನವು ಮೇಘನಿನಗರದಲ್ಲಿರುವ ವೈದ್ಯಕೀಯ ಹಾಸ್ಟೆಲ್ ಮತ್ತು ಅದರ ಕ್ಯಾಂಟೀನ್ ಸಂಕೀರ್ಣಕ್ಕೆ ಅಪ್ಪಳಿಸಿತು. ಈ ಅಪಘಾತದಲ್ಲಿ ಒಟ್ಟು 270 ಜನರು ಸಾವನ್ನಪ್ಪಿದರು.
ಈ ಘಟನೆ ನಡೆಯುವ ಸ್ವಲ್ಪ ಸಮಯದ ಮುನ್ನ ಏರ್ ಇಂಡಿಯಾದ ವಿಮಾನ ಪೈಲಟ್ ಪತನಕ್ಕೂ ಮುಂಚೆ ಏರ್ ಟ್ರಾಫಿಕ್ ಕಟ್ರೋಲರ್ಗೆ (ATC) ಕೆಲ ಸಂದೇಶಗಳನ್ನು ಕಳುಹಿಸಿದ್ದು ಇದೀಗ 5 ನಿಮಿಷಗಳ ಆಡಿಯೋ ಬಹಿರಂಗಗೊಂಡಿದೆ.
ಆಡಿಯೋದಲ್ಲೇನಿದೆ..?
ಮೇಡೇ, ಮೇಡೇ, ಮೇಡೇ... NO POWER.. NO THRUST.. GOING DOWN.. ಎಂದು ಕೂಗಿದ್ದಾರೆ. ಅಷ್ಟರಲ್ಲೇ ವಿಮಾನ ಪತನಗೊಂಡಿದೆ. ಈ ಆಡಿಯೋ ATCಗೆ ಕಳುಹಿಸಿದ್ದಾರೆ. ಇತ್ತ ಎಡಿಸಿ ಪೈಲಟ್ ಜತೆ ಸಂಪರ್ಕ ಸಾಧಿಸಲು ಎಷ್ಟೇ ಯತ್ನಿಸಿದರೂ ಸಂಪರ್ಕ ಕಡಿತಗೊಂಡಿದೆ.
ಮೇಡೇ ಅರ್ಥವೇನು..?
ಮೇಡೇ ಎಂದ್ರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ ಒಂದು ಪದವಾಗಿದ್ದು, ಜೀವಕ್ಕೆ ಸಂಕಷ್ಟ ಬಂದಾಗ ಅಥವಾ ವಿಮಾನ ಬೃಹತ್ ಗಾತ್ರದ ಸಮಸ್ಯೆಯಲ್ಲಿ ಸಿಲುಕಿಕೊಂಡಾಗ ಈ ಕರೆ ಮಾಡಲಾಗುತ್ತದೆ. ಇದಕ್ಕೆ ಮೇಡೇ ತುರ್ತು ಕರೆ ಎನ್ನುತ್ತಾರೆ. ಮೇಡೇ ಎಂದ್ರೆ Help ಮಾಡಿ ಎಂದರ್ಥ.(ಏಜೆನ್ಸೀಸ್)