ದೇವರ ದಾಸಿಮಯ್ಯ ಜಯಂತಿ

ARS RURAL
ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ಚಿಕ್ಕಹಲಕೂರು ಗ್ರಾಮದಲ್ಲಿ ಶ್ರೀ ದೇವರ ದಾಸಿಮಯ್ಯ ಜಯಂತಿಯನ್ನು ಸಡಗರ ಸಂಭ್ರಮದಿಂದ ಬುಧವಾರ ಆಚರಿಸಲಾಯಿತು.
Published on

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿ ಚಿಕ್ಕಹಲಕೂರು ಗ್ರಾಮದಲ್ಲಿ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯ ಅವರ ಜಯಂತಿ ಮಹೋತ್ಸವವನ್ನು ನೇಕಾರ ದೇವಾಂಗದವರು ಹಾಗೂ ಶ್ರೀ ರಾಮಲಿಂಗ ಚೌಡೇಶ್ವರಿ ಭಜನಾ ಮಂಡಳಿ ವತಿಯಿಂದ ಸಡಗರ ಸಂಭ್ರಮದಿಂದ ಬುಧವಾರ ಆಚರಿಸಲಾಯಿತು.

ದೇವರ ದಾಸಿಮಯ್ಯ ಅವರ ಬೃಹತ್ತಾದ ಭಾವಚಿತ್ರವನ್ನು ಗ್ರಾಮದ ಬೇವಿನ ಮರದ ಕಟ್ಟೆಯ ಮೇಲೆ ವಿವಿಧ ಪುಷ್ಪ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಶ್ರೀರಾಮಲಿಂಗ ಚೌಡೇಶ್ವರಿ ಭಜನಾ ಸಂಘದ ವತಿಯಿಂದ ಅಖಂಡ ಭಜನೆ ಮಾಡುವುದರ ಜತೆಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಹಾಗೂ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರಿಗೆ ಪಾನಕ, ಫಲಹಾರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net