

ಮಧ್ಯಪ್ರದೇಶ: ಪೆಟ್ರೋಲ್ ಬಂಕ್ನ ಆಫೀಸ್ವೊಂದರಲ್ಲಿ ಖದೀಮನೊಬ್ಬ(Thief)ಕಳ್ಳತನ ಮಾಡುವ ಮೊದಲು ದೇವರಿಗೆ ಕೈ ಮುಗಿದು 1 ಲಕ್ಷದ 57 ಸಾವಿರ ರೂ. ಕಳ್ಳತನ ಮಾಡಿದ ಅಪರೂಪ ಘಟನೆ ಇಲ್ಲಿನ ಸೋಯತ್ ಕಲಾನ್- ಸುಜಲ್ಪುರ್ನ ಹೆದ್ದಾರಿಯಲ್ಲಿ ಇತ್ತೀಚಿಗೆ ನಡೆದಿದೆ.
ಈ ಘಟನೆಯ ದೃಶ್ಯಗಳು ಪೆಟ್ರೋಲ್ ಬಂಕ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೆಟ್ರೋಲ್ ಪಂಪ್‌ನಲ್ಲಿ ದೇವರ ವಿಗ್ರಹಕ್ಕೆ ನಮಸ್ಕರಿಸಿದ ನಂತರ, ವ್ಯಕ್ತಿ ಡ್ರಾಯರ್‌ಗಳಿಂದ ಹಣವನ್ನು ಹೊರತೆಗೆದು ಎಗರಿಸಿದ್ದಾನೆ. ಎಚ್ಚೆತ್ತ ಭದ್ರತ ಸಿಬ್ಬಂದಿ ಕಳ್ಳನನ್ನು ಹಿಡಿಯಲು ಪ್ರಯತ್ನಿಸಿದರಾದರೂ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.
ಬಳಿಕ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಸ್ಥಳ ಪರಿಶೀಲನೆ ಮಾಡಿದ್ದಾರೆ. ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).