ಗೋದಾವರಿಯಲ್ಲಿ ಭಾರಿ ಪ್ರಮಾಣದಲ್ಲಿ ಅನಿಲ ಸೋರಿಕೆ! | Godavari Gas Leakage

Godavari Gas Leakage
Published on

ಅಮರಾವತಿ: ಆಂಧ್ರದ ಕೋನಸೀಮ ಜಿಲ್ಲೆಯಲ್ಲಿ ಗೋದಾವರಿ ನದಿಯಿಂದ ಅನಿಲ ಸೋರಿಕೆಯಾಗುತ್ತಿರುವುದು (Godavari Gas Leakage) ಜನರನ್ನು ಭಯಭೀತರನ್ನಾಗಿಸಿದೆ. ಕಾಟ್ರೇನಿಕೋಣ ಮಂಡಲದ ಯಾಣಂ ದರ್ಯಾಲತಿಪ್ಪ ಮತ್ತು ಬಳುಸುತಿಪ್ಪ ನಡುವವೆ ನದಿಯಲ್ಲಿ ಒಎನ್‌ಜಿಸಿ ಗ್ಯಾಸ್ ಪೈಪ್‌ಲೈನ್ ಹಾಕಿದೆ. ಆದರೆ ಸೆ.20(ಶುಕ್ರವಾರ) ರಾತ್ರಿಯಿಂದಲೇ ಗ್ಯಾಸ್ ಸೋರಿಕೆಯಾಗುತ್ತಿದ್ದು, ಇದುವರೆಗೂ ಅಧಿಕಾರಿಗಳು ಪತ್ತೆ ಮಾಡದ ಕಾರಣ ಸ್ಥಳೀಯರಲ್ಲಿ ಆತಂಕ ಎದುರಾಗಿದೆ.

Godavari Gas Leakage ಗ್ಯಾಸ್ ಹೊತ್ತಿ ಉರಿಯುವ ಭೀತಿ:

Godavari Gas Leakage

ನೀರಿನ ಮೇಲೆ ಬುಗ್ಗೆಯಂತೆ ಚಿಮ್ಮುತ್ತಿರುವ ಗ್ಯಾಸ್​ ನದಿ ತಳಭಾಗದಲ್ಲಿ ಹಾಕಿರುವ ಪೀಪ್​ ಒಡೆದಿರುವುದರಿಂದ ಬರುತ್ತಿದೆ. ಇದೀಗ ಗ್ಯಾಸ್ ಹೊತ್ತಿ ಉರಿಯುವ ಭೀತಿ ಎದುರಾಗಿದೆ.

ಇನ್ನು ಗ್ಯಾಸ್ ಸೋರಿಕೆಯಿಂದ ವಾಸನೆ ಬರುತ್ತಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದುವರೆಗೂ ನಿರ್ವಹಣಾ ಸಂಸ್ಥೆ ಸ್ಪಂದಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಎನ್‌ಜಿಸಿ ತಮ್ಮ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net