IND vs BAN: ಎರಡನೇ ಇನ್ನಿಂಗ್ಸ್‌ನ 'ಕಿಂಗ್': ಶತಕ ಬಾರಿಸಿ ಪ್ರಾಬಲ್ಯ ಮೆರೆದ ಶುಭಮನ್​ ಗಿಲ್!

gill
Published on

ಚೆನ್ನೈ: ಭಾರತ- ಬಾಂಗ್ಲಾ ತಂಡಗಳ ನಡುವೆ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಶುಕ್ರವಾರ(ಸೆ.21)ಶುಭಮನ್ ಗಿಲ್ ಬಾಂಗ್ಲಾದೇಶ ವಿರುದ್ಧ ಭರ್ಜರಿ ಇನ್ನಿಂಗ್ಸ್ ಆಡಿದ್ದು, ಶತಕ ಸಿಡಿಸಿದ್ದಾರೆ. 158 ಎಸೆತಗಳಲ್ಲಿ ಶತಕ ಪೂರೈಸಿದರು.

ಮೊದಲ ಇನ್ನಿಂಗ್ಸ್‌ನ ವೈಫಲ್ಯವನ್ನು ತೊರೆದ ಗಿಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಬುದ್ದಿವಂತಿಕೆಯಿಂದ ಬ್ಯಾಟಿಂಗ್ ಮಾಡಿ ಪಂತ್ ಜೊತೆಗೂಡಿ ತಂಡವನ್ನು ಬಲಪಡಿಸಿದರು. ಗಿಲ್ (119*: 176 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್) ಶತಕ ಸಿಡಿಸಿದ್ದಾರೆ.

ಪಂತ್ ಮತ್ತು ಗಿಲ್ ನಡುವೆ 167 ರನ್‌ಗಳ ಜೊತೆಯಾಟವಿತ್ತು. ಇಬ್ಬರೂ ಬ್ಯಾಟ್ಸ್‌ಮನ್‌ಗಳು ಶತಕ ಬಾರಿಸಿದರು. ಆದರೆ ಯುವ ಬ್ಯಾಟ್ಸ್‌ಮನ್ ಗಿಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಸಿಡಿಸಿದ್ದಾರೆ.

ಶನಿವಾರ ಮೂರನೇ ದಿನವಾದ ಎರಡನೇ ಸೆಷನ್ ನಲ್ಲಿ ಗಿಲ್ ಶತಕ ಪೂರೈಸಿದರು. ಇದು ಈ ಬಲಗೈ ಬ್ಯಾಟ್ಸ್‌ಮನ್‌ನ ಐದನೇ ಶತಕವಾಗಿದೆ. ಇದರೊಂದಿಗೆ ಎರಡನೇ ಇನ್ನಿಂಗ್ಸ್‌ನಲ್ಲಿ ನನಗೆ ಯಾವುದೇ ತೊಂದರೆ ಇಲ್ಲ ಎಂದು ಗಿಲ್ ಸಾರಿ ಹೇಳಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದ್ದ ಗಿಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಎಚ್ಚರಿಕೆ ವಹಿಸಿ ಇನ್ನಿಂಗ್ಸ್‌ ಆಡಿದರು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿರ್ಗಮನದ ನಂತರ, ಗಿಲ್ ಜವಾಬ್ದಾರಿಯನ್ನು ವಹಿಸಿಕೊಂಡರು. ರಿಷಬ್ ಪಂತ್ ಅವರೊಂದಿಗೆ ತಂಡವನ್ನು ಸುಭದ್ರ ಸ್ಥಿತಿಗೆ ತಲುಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net