ನನ್ನ ಜೀವನದ ಎರಡು ಶಕ್ತಿಗಳೆಂದರೆ ದೇವರು ಮತ್ತು ಕಾರ್ಯಕರ್ತರು: ಎಚ್​.ಡಿ.ದೇವೇಗೌಡ

JDS F
Published on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ಜೆಡಿಎಸ್ ಪಂಚರತ್ನ ಯಾತ್ರೆಯ ಬೃಹತ್ ಸಮಾರೋಪ ಸಮಾವೇಶ ದಳಪತಿಗಳ ಶಕ್ತಿಪ್ರದರ್ಶನದ ಅನಾವರಣದಂತಿದ್ದು, ಇದರಲ್ಲಿ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು ಅನಾರೋಗ್ಯದ ನಡುವೆಯೂ ಭಾಗಿಯಾಗಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

ಸಮಾರೋಪ ಸಮಾರಂಭದ ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡರು, ನಾನು ಜೀವನದಲ್ಲಿ ಉಳಿದಿದ್ದು, ರಾಜಕೀಯದಲ್ಲಿ ಬೆಳೆದಿದ್ದು, ನಿಮ್ಮಿಂದ ಮತ್ತು ದೇವರ ಕೃಪೆಯಿಂದ ಎಂದು ಹೇಳಿದರು.

ನನ್ನ ಈ ಸುದೀರ್ಘ ರಾಜಕೀಯ ಜೀವನದಲ್ಲಿ ನಾನು ಧೃತಿಗೆಡದೆ ನಡೆಯಲು ಎರಡು ದೊಡ್ಡ ಶಕ್ತಿ ಎಂದರೆ ದೇವರು ಮತ್ತು ನಮ್ಮ ಕಾರ್ಯಕರ್ತರು. ನನಗೆ ತುಂಬಾ ಆರೋಗ್ಯ ಹದಗೆಟ್ಟಿತ್ತು. ನಿಮ್ಮನ್ನು ನೋಡುತ್ತೇನೋ ಇಲ್ಲವೋ ಎಂದು ಕೊಂಡಿದ್ದೆ. ಸದ್ಯ ಸ್ವಲ್ಪ ಚೇತರಿಕೆ ಕಂಡಿದ್ದೇನೆ. ಈ ಬಾರಿ ದೇವರ ಶಕ್ತಿ, ಕಾರ್ಯಕರ್ತರ ಶ್ರಮದಿಂದ ಈ ಬಾರಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಒಬ್ಬ ರೈತನ ಮಗ, ನೀವು ರೈತರ ಮಕ್ಕಳು. ಬಣ್ಣದ ನಾಟಕದ ಮಾತುಗಳಿಂದ ಯಾವುದೇ ಅಧಿಕಾರಕ್ಕೆ ಬಂದವರಲ್ಲ. ಕಾರ್ಯಕರ್ತ, ಮುಖಂಡರ ಶ್ರಮ, ದೇವರ ಶಕ್ತಿಯಿಂದ ಅಧಿಕಾರಕ್ಕೆ ಬರುತ್ತೇವೆ ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net