

ಜಗತ್ತಿನ ಯಾವುದೇ ಮೂಲೆಗಳಲ್ಲಿ ನಡೆಯುವ ಚಿತ್ರ-ವಿಚಿತ್ರ ಘಟನೆಗಳ ವಿಡಿಯೋಗಳನ್ನೂ ಈ ಸಾಮಾಜಿಕ ಜಾಲತಾಣಗಳು ನಮ್ಮೆದುರು ತಂದಿಡುತ್ತವೆ.
ಹಾಗೇ ಯುಎಸ್ನ ಅಲಾಬಾಮಾದ ಟಾಕ್ಸಿ ಎಂಬಲ್ಲಿ ಕುರಿ ಮಾಡಿದ ಕೆಲಸವೊಂದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ನೆಟ್ಟಿಗರಂತೂ ಅದನ್ನು ನೋಡಿ ನಗುತ್ತಿದ್ದಾರೆ.
ರಸ್ತೆ ಪಕ್ಕ ಇರುವ ಪೋಸ್ಟ್ ಬಾಕ್ಸ್ (ಮೇಲ್ ಬಾಕ್ಸ್)ನಲ್ಲಿ ಹಾಕುವ ಪತ್ರಗಳನ್ನು ಅಲ್ಲಿಂದ ಎಳೆದುಕೊಂಡು ತಿನ್ನುವ ವಿಡಿಯೋ ಇದು. ಫೇಸ್ಬುಕ್ ಬಳಕೆದಾರರೊಬ್ಬರು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅವರು ರಸ್ತೆಯಲ್ಲಿ ಹೋಗುತ್ತಿದ್ದಾಗ ಕುರಿ ಮಾಡುತ್ತಿದ್ದ ಈ ಕಿತಾಪತಿ ನೋಡಿ, ವಿಡಿಯೋ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಪತ್ರಗಳನ್ನು ಕುರಿ ತಿನ್ನುವ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದೆ. ಲಕ್ಷಾಂತರ ವೀವ್ಸ್ ಬಂದಿದೆ. 2 ಸಾವಿರಕ್ಕೂ ಅಧಿಕ ಶೇರ್ ಆಗಿದೆ. ನೆಟ್ಟಿಗರಂತೂ ಸಿಕ್ಕಾಪಟೆ ಖುಷಿ ವ್ಯಕ್ತಪಡಿಸಿದ್ದಾರೆ. ಒಂದೊಮ್ಮೆ ಯಾರಿಗಾದರೂ ತಲುಪಬೇಕಿದ್ದ ಪತ್ರ ಕಾಣಿಸುತ್ತಿಲ್ಲ ಎಂದರೆ ಪೋಸ್ಟ್ ಆಫೀಸ್ನ್ನು ದೂರುವಂತಿಲ್ಲ. ಹಾಗೇ ಹುಡುಕಿದರೂ ಆ ಪತ್ರ ಮತ್ತೊಮ್ಮೆ ಸಿಗುವುದಿಲ್ಲ..ಸಿಕ್ಕರೂ ಒಂದಕ್ಷರವನ್ನೂ ಓದಲು ಸಾಧ್ಯವಿಲ್ಲ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
ನೋಡಿ ಕುರಿ ಪತ್ರವನ್ನು ತಿನ್ನುವ ವಿಡಿಯೋವನ್ನು...