ಜಾಗತಿಕ ಸ್ಟಾರ್ಟಪ್ ಶ್ರೇಯಾಂಕ ಸುಧಾರಣೆಯ ಹೆಗ್ಗಳಿಕೆ | Transition hub

Priyank kharge in paris
Published on

ಬೆಂಗಳೂರು: ಜಾಗತಿಕ ಐಟಿ-ಬಿಟಿ ನಕ್ಷೆಯಲ್ಲಿ ಬೆಂಗಳೂರು ತನ್ನದೇ ಛಾಪು ಮೂಡಿಸಿದೆ. ಇದೀಗ ನವೋದ್ಯಮ, ಯೂನಿಕಾರ್ನ್, ಕೃತಕಬುದ್ಧಿಮತ್ತೆ ತಂತ್ರಜ್ಞಾನದತ್ತ ದಾಪುಗಾಲಿಟ್ಟಿದೆ. ವಿಶ್ವದ ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ಬೆಂಗಳೂರಿಗೆ ಮತ್ತೊಂದು ಗರಿ ಮೂಡಿದೆ.

್ರಾನ್ಸ್‌ನ ಪ್ಯಾರಿಸ್‌ನಲ್ಲಿ ಏರ್ಪಡಿಸಿರುವ ಮೂರು ಪ್ರಮುಖ ಜಾಗತಿಕ ವೇದಿಕೆಗಳಾದ ವಿವಾ ಟೆಕ್ನಾಲಜಿ, ಪ್ಯಾರಿಸ್ ಏರ್‌ೆರಮ್ ಮತ್ತು ಪ್ಯಾರಿಸ್ ಏರ್‌ಶೋಗಳಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ರಾಜ್ಯದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಭಾಗಿಯಾಗಿದ್ದಾರೆ.

ವಿವಾಟೆಕ್ ವೇದಿಕೆಯಲ್ಲಿ ಜಾಗತಿಕರ ಸ್ಟಾರ್ಟ್‌ಪ್ ಪರಿಸರ ವ್ಯವಸ್ಥೆ (ಜಿಎಸ್‌ಇಆರ್) ವರದಿ 2025 ಬಿಡುಗಡೆಯಾಗಿದೆ. ಬೆಂಗಳೂರು ಜಾಗತಿಕ ಶ್ರೇಯಾಂಕದಲ್ಲಿ ಏಳ ಸ್ಥಾನ ಮೇಲಕ್ಕೇರಿದೆ. ಕಳೆದ ವರ್ಷ 21 ಸ್ಥಾನದಲ್ಲಿದ್ದ ಬೆಂಗಳೂರು ಏಳು ಸ್ಥಾನ ಮೇಲಕ್ಕೇರಿ 14ನೇ ಸ್ಥಾನ ತಲುಪಿದೆ.

ಬೆಂಗಳೂರಿನ ಶ್ರೇಯಾಂಕ ಕೇವಲ ಒಂದು ಸಂಖ್ಯೆಯಲ್ಲ ಕರ್ನಾಟಕದ ನಾವೀನ್ಯತೆಯ ಪ್ರತಿಬಿಂಬವಾಗಿದೆ. ಉನ್ನತ ಶ್ರೇಣಿಯ ಜಾಗತಿಕ ನವೋದ್ಯಮ ಕೇಂದ್ರವಾಗಿ ಪರಿವರ್ತನೆಗೊಳ್ಳುವುದನ್ನು ಖಾತರಿಪಡಿಸಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಎಐ-ಸಿದ್ಧ ಭವಿಷ್ಯ ಸಾದರ

ವಿವಾಟೆಕ್ ಸಂವಾದದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕೃತಕಬುದ್ಧಿಮತ್ತೆ ತಂತ್ರಜ್ಞಾನ (ಎಐ) ಸಿದ್ಧ ಭವಿಷ್ಯದ ಕುರಿತು ತಮ್ಮ ವಿಚಾರಗಳನ್ನು ಸಾದರಪಡಿಸಿದರು. ಜಾಗತಿಕ ನಾವೀನತ್ಯೆಯನ್ನು ಎಐ ಹೇಗೆ ಮರುರೂಪಿಸುತ್ತಿದ್ದು, ಕರ್ನಾಟಕ ಪಿರಮಿಡ್ ಮಾದರಿಯನ್ನು ವಿವರಿಸಿದರು.

ಭವಿಷ್ಯಕ್ಕೆ ಸಿದ್ಧವಾದ ಎಲ್ಲರನ್ನೂ ಒಳಗೊಂಡ ಎಐ ಆರ್ಥಿಕತೆಯನ್ನು ನಿರ್ಮಿಸಲು ರಾಜ್ಯದ ಸಮಗ್ರ ಕಾರ್ಯತಂತ್ರವನ್ನು ವಿವರಿಸಿದರು. ಎಐ ಸಂಶೋಧನೆ ಮತ್ತು ಅಭಿವೃದ್ಧಿ, ಬೆಂಗಳೂರಿನಾಚೆ ಕ್ರಮ ಮುಂತಾದ ಮಾಹಿತಿಗಳನ್ನು ಪ್ರಿಯಾಂಕ್‌ಖರ್ಗೆ ಹಂಚಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net