

ನವದೆಹಲಿ: ಈಗಾಗಲೇ ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ರೂಪಾಂತರಿ ಕರೊನಾ 'ಒಮಿಕ್ರಾನ್' ಸಾಕಷ್ಟು ಆತಂಕವನ್ನು ಮೂಡಿಸಿದೆ. ಈ ನಡುವೆ ಒಮಿಕ್ರಾನ್ ಅಷ್ಟೇನೂ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಅದು ಜಾಗತಿಕವಾಗಿ ಅಪಾಯಕಾರಿ ಎಂಬ ಮಾಹಿತಿಯೂ ಹೊರಹೊಮ್ಮಿದ್ದು, ಅದರೆಡೆಗಿನ ಆತಂಕ ಮತ್ತಷ್ಟು ಹೆಚ್ಚಾಗುವಂತಾಗಿದೆ.
ಇಂಥದ್ದೊಂದು ಅಭಿಪ್ರಾಯವನ್ನು ವಿಶ್ವ ಆರೋಗ್ಯ ಸಂಸ್ಥೆಯೇ ವ್ಯಕ್ತಪಡಿಸಿದೆ. ಕೋವಿಡ್ನ ಹೊಸ ರೂಪಾಂತರಿ ಒಮಿಕ್ರಾನ್ ಅಧಿಕ ಮ್ಯುಟೇಷನ್ ಹೊಂದಿದ್ದು, ರೋಗನಿರೋಧಕ ಶಕ್ತಿಯನ್ನೂ ದಾಟಿ ವ್ಯಾಪಕವಾಗಿ ಹರಡಬಲ್ಲಂಥದ್ದು ಎಂಬುದು ತಿಳಿದುಬಂದಿದೆ. ಅದಾಗ್ಯೂ ಒಮಿಕ್ರಾನ್ ಕುರಿತು ಖಚಿತ ಮಾಹಿತಿಗಳ ಕೊರತೆ ಇನ್ನೂ ಇರುವುದಾಗಿಯೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇನ್ನು ಈ ಹಿನ್ನೆಲೆಯಲ್ಲಿ ಕೋವಿಡ್-19 ಸೋಂಕು ಅತಿಯಾಗಿ ವ್ಯಾಪಿಸುವ ಸಾಧ್ಯತೆ ಇದ್ದು, ಸೋಂಕು ಕಾಣಿಸಿಕೊಂಡ ಪ್ರದೇಶಕ್ಕೆ ಅನುಗುಣವಾಗಿ ಅದರ ಪರಿಣಾಮಗಳು ಗಂಭೀರವಾಗಿರುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ ಪಟ್ಟಿದೆ.