VIDEO| ಮನೆಗೆ ಡಿಕ್ಕಿ ಹೊಡೆದ ಗ್ಲೈಡರ್ ವಿಮಾನ; ಇಬ್ಬರ ಸ್ಥಿತಿ ಗಂಭೀರ

Pilot child injured as glider plane crashes into house in Jharkhands Dhanbad
Published on

ಪಾಟ್ನಾ: ಜಾರ್ಹಾಂಡ್‌ನ ಧನ್‌ಬಾದ್‌ನಲ್ಲಿ ಗ್ಲೈಡರ್ ವಿಮಾನವು ಮನೆಯ ಗೋಡೆಗೆ ಅಪ್ಪಳಿಸಿದೆ. ಈ ಅಪಘಾತದಲ್ಲಿ ಪೈಲಟ್ ಮತ್ತು ಬಾಲಕ ಗಂಭೀರ ಗಾಯಗಳಾಗಿವೆ.

ಪೈಲಟ್ ಮತ್ತು 14 ವರ್ಷದ ಬಾಲಕ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೈಲಟ್ ಮತ್ತು ಬಾಲಕ ಪ್ರಯಾಣಿಸುತ್ತಿದ್ದ ವಿಮಾನವು ಧನ್‌ಬಾದ್‌ನ ಆಕಾಶದಿಂದ ಕೊಯಲಾಂಚಲ್‌ನ ವೈಮಾನಿಕ ಪ್ರವಾಸಕ್ಕಾಗಿ ಹೊರಟಿತ್ತು. ಟೆಕ್​ ಆಫ್​​ ಆಗಿ 500 ಮೀಟರ್ ದೂರದಲ್ಲಿರುವ ಮನೆಗೆ ಅಪ್ಪಳಿಸಿತು. ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದ್ದು, ಘಟನೆಯ ದೃಶ್ಯಾವಳಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸರಿಯಾದ ತನಿಖೆಯ ನಂತರವೇ ಕಾರಣ ತಿಳಿಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ಲೈಡರ್ ವಿಮಾನ ಬಿದ್ದ ಮನೆಯ ಮಾಲೀಕ ನೀಲೇಶ್ ಕುಮಾರ್, ತಮ್ಮ ಕುಟುಂಬದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಮನೆಯೊಳಗೆ ಆಟವಾಡುತ್ತಿದ್ದ ಅವರ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದ್ದಾರೆ.

ಧನ್‌ಬಾದ್‌ನ ಜನರು ಮನರಂಜನೆಗಾಗಿ ನಗರವನ್ನು ವೀಕ್ಷಿಸಲು ಈ ಗ್ಲೈಡರ್ ಸೇವೆಯನ್ನು ಪ್ರಾರಂಭಿಸಲಾಗಿದೆ. ಘಟನೆಯ ನಂತರ ನಗರದ ವೈಮಾನಿಕ ಪ್ರವಾಸವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net