

ಬೆಂಗಳೂರು: ಅಲ್ಪದಿಂದ ಮಧ್ಯಮ ಹಂತದವರೆಗಿನ ಕೋವಿಡ್-19 ಚಿಕಿತ್ಸೆಗಾಗಿ ಬಾಯಿ ಮೂಲಕ ಕೊಡಬಹುದಾದ ಫವಿಪಿರಾವಿರ್ ಔಷಧವನ್ನು ತಯಾರಿಸಿ ಮಾರಾಟ ಮಾಡಲು ಔಷಧ ನಿಯಂತ್ರಕರು ಅನುಮತಿ ನೀಡಿರುವುದಾಗಿ ಗ್ಲೆನ್ಮಾರ್ಕ್ ಫಾರ್ಮಸ್ಯುಟಿಕಲ್ಸ್ ಲಿಮಿಟೆಡ್ ಹೇಳಿಕೊಂಡಿದೆ.
ಶುಕ್ರವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಮುಂಬೈ ಮೂಲದ ಔಷಧ ತಯಾರಿಕಾ ಕಂಪನಿ ಗ್ಲೆನ್ಮಾರ್ಕ್ ಫಾರ್ಮಸ್ಯುಟಿಕಲ್ಸ್, ತುರ್ತು ಪರಿಸ್ಥಿತಿಯಲ್ಲಿ ಮಾತ್ರವೇ ಈ ಔಷಧವನ್ನು ಬಳಕೆ ಮಾಡಲು ಔಷಧ ನಿಯಂತ್ರಕರು ಅನುಮತಿ ನೀಡಿರುವುದಾಗಿ ತಿಳಿಸಿದೆ. ಇದೇ ವರ್ಗದಲ್ಲಿ ಈ ಔಷಧವನ್ನು ದೇಶಾದ್ಯಂತ ಮಾರಾಟ ಮಾಡಲಾಗುವುದು ಎಂದು ಹೇಳಿದೆ.
ಜಪಾನ್ನ ಫ್ಯೂಜಿಫಿಲಂ ಹೋಲ್ಡಿಂಗ್ಸ್ಕಾರ್ಪೋರೇಷನ್ನ ಬ್ರ್ಯಾಂಡ್ನೇಮ್ ಅವಿಗಾನ್ ಹೆಸರಿನಲ್ಲಿ ಫವಿಪಿರಾವಿರ್ ಔಷಧವನ್ನು ಮಾರುಕಟ್ಟೆ ಬಿಡುಗಡೆ ಮಾಡುತ್ತಿರುವುದಾಗಿಯೂ ಕಂಪನಿ ಹೇಳಿಕೊಂಡಿದೆ. ಅವಿಗಾನ್ ಅನ್ನು ಫ್ಲ್ಯೂ ಚಿಕಿತ್ಸೆಯಲ್ಲಿ ಬಳಸುವುದಕ್ಕಾಗಿ 2014ರಲ್ಲಿ ಅನುಮತಿ ದೊರೆತಿತ್ತು.