

ನವದೆಹಲಿ: ವಾಹನ ಚಲಾಯಿಸುವಾಗ ಕನ್ನಡಕ ಧರಿಸುವುದು ಸಾಮಾನ್ಯವಾಗಿದೆ. ಆದರೆ ಇಂದು ಕೂಲಿಂಗ್ನಿಂದ ಹಿಡಿದು ವೈದ್ಯರು ಕಣ್ಣಿನ ದೋಷಕ್ಕೆ ನೀಡುವ ಕನ್ನಡಕಗಳು ಇವೆ. ಆದರೆ ನಾವು ಇಂದು ಹೇಳುವ ಕನ್ನಡ ಮಾರುಕಟ್ಟೆಯಲ್ಲಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಬೇಡಿಕೆ ಇದೆ. ಇಂತಹ ಕನ್ನಡಕ ಯಾವುದು ಎಂದು ಯೋಚಿಸುವ ನಿಮಗೆ ಇಲ್ಲಿದೆ ಉತ್ತರ.....
ಈ ಕನ್ನಡಕವನ್ನು ಧರಿಸಿದರೆ ಹಾರ್ಟ್, ಎಮೋಜಿಗಳು, ಗಿಡ,ಮರ ಹೂ ಹೀಗೆ ವಿಭಿನ್ನವಾದ ಡಿಸೈನ್ಗಳು ಲಭ್ಯವಿದೆ. ಮಾರುಕಟ್ಟೆಯಲ್ಲಿ ಇಂತಹ ವಿಭಿನ್ನವಾದ ಕನ್ನಡಕಗಳು ಲಭ್ಯವಿದೆ. ಇಂದಿನ ಯುವಕ, ಯುವತಿಯರು ಇಂಹತ ಯೂನಿಕ್ ಸ್ಟೈಲ್ ಇರುವ ಕನ್ನಡಕಗಳಿಗೆ ಬೇಡಿಕೆ ಇದೆ. ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು ತಾವು ಹೊಸದಾಗಿ ಖರೀದಿಸಿದ ಈ ಕನ್ನಡಕವನ್ನು ಧರಿಸಿ ವಾಹನ ಚಲಾಯಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋ ಅನ್ನು 5,200ಕ್ಕೂ ಹೆಚ್ಚು ಜನ ನೋಡಿದ್ದಾರೆ.
ಟ್ರಿಪ್ಗೆ ಇದೆಲ್ಲ ಒಳ್ಳೆಯದು. ಹೌದು ಡ್ರೈವಿಂಗ್ಗೆ ಇದು ಸುರಕ್ಷಿತ ಅಲ್ಲ, ಅದರಲ್ಲೂ ರಾತ್ರಿ ಧರಿಸುವುದು ಅಪಾಯಕಾರಿ…ಇದನ್ನು ಮೋಜಿನಿಂದ ನೋಡಿದ್ದಾರಾದರೂ ಅನೇಕರು ಇದು ಕಣ್ಣಿಗೆ ಅಪಾಯಕಾರಿ ಎಂದು ಕಾಮೆಂಟ್ ಮಾಡಿದ್ದಾರೆ.
ಗಮನಿಸಿ: ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಇಂತಹ ವಿಡಿಯೋವನ್ನು ಮೋಜಿಗಾಗಿ ಮಾತ್ರ ನೋಡಬೇಕು. ಎಚ್ಚರಿಕೆಯಲ್ಲಿ ಧರಿಸಬೇಕು.