ಬೆಳ್ಳಿ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ 'ಗ್ಲಾಡಿಯೇಟರ್- 2': ಬಿಡುಗಡೆ ಯಾವಾಗ ಗೊತ್ತಾ? gladiator-2

gladiater 2 .
gladiater 2 moovie
Published on

ಮುಂಬೈ: ಹಾಲಿವುಡ್​ನಲ್ಲಿ ಇತಿಹಾಸ ನಿರ್ಮಿಸಿದ್ದ ಗ್ಲಾಡಿಯೇಟರ್ ನ ಮುಂದುವರಿದ ಭಾಗ 'ಗ್ಲಾಡಿಯೇಟರ್- 2' ಮೊದಲ ಭಾಗ ಬಿಡುಗಡೆಯಾದ 24 ವರ್ಷಗಳ ಬಳಿಕ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. gladiator-2

ಹಾಲಿವುಡ್ ಚಿತ್ರಗಳು ವಿಭಿನ್ನ ಹಂತದ ಕಥೆಯೊಂದಿಗೆ ಬಿಡುಗಡೆಯಾಗುತ್ತವೆ. ಅದ್ಭುತ ವಿಎಫ್‌ಎಕ್ಸ್ ಮತ್ತು ಉನ್ನತ ತಂತ್ರಜ್ಞಾನದಿಂದ ತುಂಬಿದ ಇಂಗ್ಲಿಷ್ ಚಿತ್ರಗಳ ಕಡೆ ಭಾರತೀಯ ಪ್ರೇಕ್ಷಕರೂ ಹೆಚ್ಚು ಒಲವು ತೋರುವುದು ಕಂಡುಬರುತ್ತದೆ. ಇನ್ನು ಕೆಲವೇ ತಿಂಗಳುಗಳಲ್ಲಿ 'ಗ್ಲಾಡಿಯೇಟರ್ 2' ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಈ ಚಿತ್ರದ ಚರ್ಚೆ ಜೋರಾಗಿದೆ.

ನವೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಪ್ರೇಕ್ಷಕರು 'ಗ್ಲಾಡಿಯೇಟರ್ 2' ಬಗ್ಗೆ ಯೋಚಿಸುತ್ತಿರುವ ಬೆನ್ನಲ್ಲೇ ತಯಾರಕರು ಮೂರನೇ ಭಾಗದ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ

ಹಾಲಿವುಡ್ ಫ್ಯಾಂಟಸಿ ಸಿನಿಮಾ 'ಗ್ಲಾಡಿಯೇಟರ್' ನ ಮೊದಲ ಭಾಗವು 2000 ರಲ್ಲಿ ಬಿಡುಗಡೆಯಾಯಿತು, ಇದು ಬಾಕ್ಸ್​ ಆಪೀಸ್​ನಲ್ಲಿ ದಾಖಲೆ ಬರೆದಿತ್ತು. ಇದೀಗ 24 ವರ್ಷಗಳ ನಂತರ ಚಿತ್ರದ ಎರಡನೇ ಭಾಗ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ರಿಡೆಲ್ ಸ್ಕಾಟ್ ನಿರ್ದೇಶನದ 'ಗ್ಲಾಡಿಯೇಟರ್' ಆ ಕಾಲದ ದೊಡ್ಡ ಹಿಟ್ ಎಂದು ಸಾಬೀತಾಯಿತು. ಅಂದಿನಿಂದ, ಚಿತ್ರದ ಸೀಕ್ವೆಲ್ ಬಗ್ಗೆ ಅನೇಕ ಬಾರಿ ಚರ್ಚೆಗಳು ಪ್ರಾರಂಭವಾಗಿದ್ದವು. ಈಗ ಅದರ ಕಾಯುವಿಕೆ ಕೊನೆಗೊಳ್ಳುತ್ತದೆ. ಇದರೊಂದಿಗೆ ಮತ್ತೊಮ್ಮೆ ರಸೆಲ್ ಕ್ರೋವ್ ಅವರ ಅದ್ಭುತ ನಟನೆಯೂ ಕಣ್ತುಂಬಿಕೊಳ್ಳಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net