ಆದಿ ದ್ರಾವಿಡರಿಗೆ ಏಕರೂಪ ಪ್ರಮಾಣ ಪತ್ರ ನೀಡಿ

06bhr 1
ಬಾಳೆಹೊನ್ನೂರಿನ ನಡೆದ ಜಿಲ್ಲಾ ಆದಿ ದ್ರಾವಿಡ ಸಮುದಾಯದ ಸಭೆಯಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಂಘದ ಪದಾಧಿಕಾರಿಗಳು ಜಿಲ್ಲಾ ಅಧ್ಯಕ್ಷ ಸುರೇಶ್‌ಗೆ ಮನವಿ ಸಲ್ಲಿಸಿದರು. ಸೀನಾ, ಮೋನಪ್ಪ, ರಮೇಶ್, ನೀಲಯ್ಯ ಇದ್ದರು.
Published on

ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಆದಿ ದ್ರಾವಿಡ ಸಮುದಾಯದವರಿಗೆ ಬೇರೆ ಬೇರೆ ಜಾತಿ ಪ್ರಮಾಣ ಪತ್ರ ನೀಡಿದ್ದು, ಅದನ್ನು ಬದಲಿಸಿ ಏಕರೂಪದ ಪ್ರಮಾಣ ಪತ್ರ ನೀಡಬೇಕು ಎಂದು ಜಿಲ್ಲಾ ಆದಿ ದ್ರಾವಿಡ ಸಮಾಜದ ಅಧ್ಯಕ್ಷ ಸುರೇಶ್ ಆರ್.ಡಿ.ಕೊಪ್ಪ ಹೇಳಿದರು.
ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಬುಧವಾರ ನಡೆದ ಆದಿ ದ್ರಾವಿಡ ಸಮಾಜದ ಸಭೆಯಲ್ಲಿ ಮಾತನಾಡಿ, ಆದಿ ದ್ರಾವಿಡರಿಗೆ ಏಕ ರೂಪದ ಪ್ರಮಾಣ ಪತ್ರ ನೀಡುವಂತೆ ಸರ್ಕಾರಕ್ಕೆ ಶೀಘ್ರವಾಗಿ ಒತ್ತಾಯಿಸಲಾಗುವುದು. ಸಮುದಾಯದ ಬಹುತೇಕ ಬಡ ಕುಟುಂಬಗಳು ವಾಸಿಸಲು ಸ್ವಂತ ಮನೆಯಿಲ್ಲದೆ ಎಸ್ಟೇಟ್, ಕೂಲಿ ಲೈನ್‌ನ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಆ ಕುಟುಂಬಗಳಿಗೆ ನಿವೇಶನ ಮತ್ತು ಹಕ್ಕುಪತ್ರ ಸೌಲಭ್ಯವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಡಿಸೆಂಬರ್‌ನಲ್ಲಿ ಆದಿ ದ್ರಾವಿಡ ಸಮಾಜದ ರಾಜ್ಯ ಸಂಘಟನಾ ಸಮಾವೇಶ ಮಂಗಳೂರಿನಲ್ಲಿ ನಡೆಯಲಿದ್ದು, ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಸೀನಾ, ರಾಜ್ಯ ಸಮಿತಿ ಉಪಾಧ್ಯಕ್ಷ ಎ.ಎಸ್.ಮೋನಪ್ಪ, ಆರಾಧನಾ ಸಮಿತಿ ಜಿಲ್ಲಾಧ್ಯಕ್ಷ ರಮೇಶ್, ಉಪಾಧ್ಯಕ್ಷ ನೀಲಯ್ಯ, ಜಿಲ್ಲಾ ಕಾರ್ಯದರ್ಶಿ ಮಹಾಬಲ, ಖಜಾಂಚಿ ದೇಜಪ್ಪ, ಪ್ರಧಾನ ಕಾರ್ಯದರ್ಶಿ ಕೃಷ್ಣ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net