

ನವದೆಹಲಿ: ತಮ್ಮ ಪ್ರತಿಭೆಗಳನ್ನು ತೋರಲು ಅವಕಾಶಕ್ಕಾಗಿ ಕಾಯುತ್ತಿದ್ದ ಕಾಲವೊಂದಿತ್ತು. ಆದರೀಗ ಆಗಿಲ್ಲ. ಸಾಮಾಜಿಕ ಜಾಲತಾಣ ಬಂದಾಗಿನಿಂದ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಪ್ರತಿಭೆ ಎಲ್ಲರ ಮುಂದೆ ಕ್ಷಣಾರ್ಧದಲ್ಲಿ ಅನಾವರಣಗೊಳ್ಳುತ್ತಾರೆ.
ವ್ಲಾಗ್ಗರ್ಸ್, ಬ್ಲಾಗರ್ಸ್ ಅಥವಾ ಟಿಕ್ಟಾಕ್ ಬಳಕೆದಾರರಾಗಿರಲಿ ತಮ್ಮ ವಿನೂತನ ವಿಷಯದ ಮೂಲಕವೇ ಸೆಲಿಬ್ರೆಟಿಗಳಾಗಿಬಿಡುತ್ತಾರೆ. ಅಂಥದ್ದೆ ಒಂದು ಪ್ರಕರಣದಲ್ಲಿ ನಾಲ್ವರು ಯುವತಿಯರು ತಮ್ಮ ಮುಖಭಾವದಿಂದಲೇ ಕ್ಷಣಾರ್ಧದಲ್ಲಿ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಯುವತಿಯರ ಟಿಕ್ಟಾಕ್ ವಿಡಿಯೋವೊಂದು ವೈರಲ್ ಆಗಿದ್ದು, ಅವರ ಮುಖಭಾವಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಯುವತಿಯರು ಮ್ಯಾಜಿಕ್ ಶೋ ಒಂದನ್ನು ಹಾಸ್ಯಸ್ಪದವಾಗಿ ಪುನರಾವರ್ತಿಸಿದ್ದು, ಅವರ ಮುಖಭಾವವನ್ನು ಹೊಗಳಲು ಪದಗಳೇ ಸಾಲದು ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೆಂಥಾ ಮ್ಯಾಜಿಕ್? ಯುವತಿಯರ ಮುಖಭಾವ ಅಷ್ಟೊಂದು ಆಕರ್ಷಣೆ ಹೊಂದಿದೆಯಾ ಎಂಬ ಕುತೂಹಲವಿದ್ದರೆ, ಈ ಕೆಳಗಿನ ವಿಡಿಯೋವನ್ನೊಮ್ಮೆ ನೋಡಿಬಿಡಿ.
ಇನ್ನು ಈ ವಿಡಿಯೋವನ್ನು ಶನಿವಾರವಷ್ಟೇ ಟ್ವಿಟರ್ನಲ್ಲಿ ಶೇರ್ ಮಾಡಲಾಗಿದ್ದು, ಅತಿ ಕಡಿಮೆ ಸಮಯದಲ್ಲಿ ಭಾರಿ ವೈರಲ್ ಆಗಿದೆ. ಈಗಾಗಲೇ 84 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, 4 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ಸ್ ಮಾಡಿದ್ದಾರೆ. (ಏಜೆನ್ಸೀಸ್)